ಪ್ರಲ್ಹಾದ ಜೋಶಿ ಆರೋಗ್ಯಕ್ಕಾಗಿ ಸಾಯಿಬಾಬಾನ ಸನ್ನಿಧಿಯಲ್ಲಿ ವಿಶೇಷ ಪೂಜೆ..!

ಹುಬ್ಬಳ್ಳಿ: ಕೇಂದ್ರ ಸಚಿವ ಹಾಗೂ ಧಾರವಾಡ ಸಂಸದ ಪ್ರಲ್ಹಾದ ಜೋಶಿಯವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಅವರ ಆರೋಗ್ಯಕ್ಕಾಗಿ ನಗರ ಶ್ರೀ ಸಾಯಿಬಾಬಾ ಮಂದಿರದಲ್ಲಿ ವಿಶೇಷ ಪೂಜೆಯನ್ನ ಹಮ್ಮಿಕೊಳ್ಳಲಾಗಿತ್ತು.
ಬಿಜೆಪಿ ಪ್ರಮುಖ ಮಹೇಂದ್ರ ಕೌತಾಳ ನೇತೃತ್ವದಲ್ಲಿ ಸಂಗೊಳ್ಳಿ ರಾಯಣ್ಣನ ವೃತ್ತದ ಸಮೀಪವಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರ ಮುಂದೆ 101 ಟೆಂಗಿನಕಾಯಿ ಒಡೆದು ಸೇವೆ ಸಲ್ಲಿಸಲಾಯಿತು.
ಮಂದಿರದಲ್ಲಿ ವಿಶೇಷವಾದ ಪೂಜೆಯನ್ನ ಆಯೋಜನೆ ಮಾಡಿ, ಆದಷ್ಟು ಬೇಗನೇ ಪ್ರಲ್ಹಾದ ಜೋಶಿ ಗುಣಮುಖರಾಗಲಿ ಎಂದು ಪ್ರಾರ್ಥಿಸಿದರು.
ನಿನ್ನೆ ಸಾಯಂಕಾಲವಷ್ಟೇ ಪ್ರಲ್ಹಾದ ಜೋಶಿಯವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಹೋಂ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.