ಬಾಳ “ಪಗಡೆ” ಆಟದಲ್ಲಿ ಕಾಯಿ ಯಾರೂ… ‘ದಾಳ ಉರುಳಿಸಿದ’ ಸಚಿವ ಪ್ರಲ್ಹಾದ ಜೋಶಿ…!!!

ಧಾರವಾಡ: ಗ್ರಾಮೀಣ ಪ್ರದೇಶದಲ್ಲಿ ಈಗ ಪಗಡೆಯಾಟವನ್ನ ಬಹುತೇಕ ದೇವಸ್ಥಾನಗಳ ಮುಂದೆ ಆಡುವುದು ರೂಢಿ. ಆ ಆಟವನ್ನ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಸ್ಥಳೀಯರೊಂದಿಗೆ ಆಡಿ ಸಮಯ ಕಳೆದರು.
ಹೌದು… ಧಾರವಾಡ ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಪಗಡೆಯಾಟವಾಡಿದ ಸಚಿವರು, ಅದನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕೇಂದ್ರ ಸಚಿವರು ಗ್ರಾಮಸ್ಥರೊಂದಿಗೆ ಸಮಯ ಕಳೆದಿದ್ದನ್ನ ಜನರು ಇಷ್ಟಪಟ್ಟರು. ಪುರಾತನ ಹಿನ್ನೆಲೆ ಹೊಂದಿರುವ ಪಗಡೆಯಾಟದಲ್ಲಿ ಕಾಯಿ ಯಾರೂ ಎಂಬ ಪ್ರಶ್ನೆ ಸಚಿವರಲ್ಲಿ ಮೂಡಿದ್ದು, ಕಂಡು ಬಂದಿದೆ.