ಹುಬ್ಬಳ್ಳಿಯ ಪ್ರಲ್ಹಾದ ಜೋಶಿ ಮನೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ದಿಢೀರ್ ಭೇಟಿ…!
1 min readಹುಬ್ಬಳ್ಳಿ: ರಾಜ್ಯ ರಾಜಕೀಯದಲ್ಲಿ ಕ್ಷೀಪ್ರಗತಿಯ ಬದಲಾವಣೆಗಳು ನಡೆಯುತ್ತಿರುವ ಬೆನ್ನಲ್ಲೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನ ಭೇಟಿಯಾಗಲು ಮಯೂರಿ ಎಸ್ಟೇಟ್ ನಲ್ಲಿರುವ ಮನೆಗೆ ದಿಡೀರ್ ತೆರಳಿದ್ದಾರೆ.
ಮುಖ್ಯಮಂತ್ರಿಯ ಬದಲಾವಣೆ ದಿನಾಂಕ ಸಮೀಪಿಸುತ್ತಿದ್ದ ಹಾಗೇ ಹಲವು ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇಂದು ಬೆಳಿಗ್ಗೆಯಷ್ಟೇ ನನಗೆ ಸಿಎಂ ವಿಷಯವಾಗಿ ಏನೂ ಗೊತ್ತಿಲ್ಲವೆಂದಿದ್ದ ಪ್ರಲ್ಹಾದ ಜೋಶಿಯವರ ಮನೆಗೆ ಗೃಹ ಸಚಿವರು ಭೇಟಿ ನೀಡಿದ್ದು, ಮಹತ್ವ ಪಡೆದಿದೆ.
ಕೆಲವೇ ನಿಮಿಷಗಳಲ್ಲಿ ಹಿಂದೆ ವಿಜಯನಗರದ ಗೃಹ ಸಚಿವರ ಮನೆಯಿಂದ ಪ್ರಲ್ಹಾದ ಜೋಶಿಯವರ ಮನೆಯವರೆಗೆ ಪೊಲೀಸ್ ನಿಯೋಜನೆ ಮಾಡಲಾಗಿದ್ದು, ಹಲವರು ಕರ್ನಾಟಕವಾಯ್ಸ್.ಕಾಂ ಗೆ ಕರೆ ಮಾಡಿ, ಪ್ರಲ್ಹಾದ ಜೋಶಿಯವರು ಮುಂದಿನ ಸಿಎಂ ಆಗಲಿದ್ದಾರೆಯೇ ಎಂಬ ಕುತೂಹಲದ ಪ್ರಶ್ನೆಯನ್ನ ಕೇಳುತ್ತಿದ್ದಾರೆ. ಇದಕ್ಕೆ ಕಾರಣವಾಗಿದ್ದು ಕತ್ತಲದಲ್ಲಿನ ಈ ಬೆಳವಣಿಗೆ ಕುತೂಹಲಗಳಿಗೆ ಕಾರಣವಾಗಿದೆ.
ಸುಮಾರು 8.30ಕ್ಕೆ ಕೇಂದ್ರ ಸಚಿವರ ಮನೆಗೆ ಭೇಟಿಗೆ ಬಂದಿದ್ದ ಬಸವರಾಜ ಬೊಮ್ಮಾಯಿ ಸುಮಾರು 9.40ರ ನಂತರವೂ ಮಾತುಕತೆಯನ್ನ ಮನೆಯ ಮಹಡಿಯ ಮೇಲೆ ಮುಂದುವರೆಸಿದ್ದಾರೆ. ಕತ್ತಲದ ಈ ಬೆಳವಣಿಗೆ ಮತ್ತಷ್ಟು ಕುತೂಹಲವನ್ನ ರಾಜಕೀಯದಲ್ಲಿ ಕೆರಳಿಸಿದೆ.
ಇನ್ನೋಂದೆಡೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಆರ್ ಎಸ್ ಎಸ್ ನ ರಾಷ್ಟ್ರ ಮಟ್ಟದ ಪ್ರಮುಖರೊಬ್ಬರಿಗೆ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆನ್ನಲಾಗಿದೆ.
ಧಾರವಾಡ ಜಿಲ್ಲೆಯ ಉಭಯ ನಾಯಕರುಗಳ ಕತ್ತಲಿನಲ್ಲಿನ ರಾಜಕೀಯ ಪ್ರಹಸನ ರಾಜ್ಯದಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.