Posts Slider

Karnataka Voice

Latest Kannada News

ಪಕ್ಷಕ್ಕೆ “ಅದು” ಮುಜುಗರ ತರೋ ವಿಷಯ- ಕೇಂದ್ರ ಸಚಿವ ಪ್ರಲ್ಹಾದ ಜೋಶಿ…!

1 min read
Spread the love

ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷ ಶಿಸ್ತಿನ ಪಕ್ಷ. ಸಚಿವ ರಮೇಶ ಜಾರಕಿಹೊಳಿಯವರ ಸಿಡಿಯ ಬಗ್ಗೆ ಸತ್ಯಾಸತ್ಯತೆ ತಿಳಿದುಕೊಳ್ಳಬೇಕು. ಈ ಘಟನೆ ಮಾತ್ರ ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹುಬ್ಬಳ್ಳಿಯಲ್ಲಿ ಹೇಳಿದರು.

ರಾಜ್ಯದ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಸಿಡಿ ಹೊರಬಿದ್ದಿರುವ ಬಗ್ಗೆ ಅಭಿಪ್ರಾಯವ್ಯಕ್ತಪಡಿಸಿದ ಪ್ರಲ್ಹಾದ ಜೋಶಿಯವರು, ನಮ್ಮದೂ ಶಿಸ್ತಿನ ಪಕ್ಷ. ನಾಯಕರಾದವರು ಸ್ವಂತ ಬದುಕು ಹಾಗೂ ಭ್ರಷ್ಟಾಚಾರ ವಿಚಾರದಲ್ಲಿ ಶುದ್ದ ಹಸ್ತರಾಗಿರಬೇಕು ಎಂದರು.

ಸಿಡಿ ವಿಚಾರದಲ್ಲಿ ಸತ್ಯಾಸತ್ಯತೆ ಬಗ್ಗೆ ತನಿಖೆಯಾಗಲಿ. ಸಿಡಿ ಕುರಿತು ನಾನು ಸಿಎಂ ಹಾಗೂ ಪಕ್ಷದ ಅಧ್ಯಕ್ಷರ ಜೊತೆ ಮಾತನಾಡುವೆ. ನಾಳೆ ದೆಹಲಿಯಲ್ಲಿ ಪಕ್ಷದ ವರಿಷ್ಠರು ಮುಖಂಡರ ಜೊತೆಯೂ ಈ ವಿಚಾರ ಚರ್ಚೆ ಮಾಡುತ್ತೇವೆ. ತಪ್ಪಿತಸ್ಥರಾಗಿದ್ರೆ ಕ್ರಮ‌ ಖಂಡಿತವಾಗಿ ತಗೆದುಕೊಳ್ಳುತ್ತೇವೆ ಎಂದು ಹೇಳಿದರು.

ರಾಜೀನಾಮೆ ಪಡೆಯುವ ಮುಂಚೆಯೂ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ಮಾಡುತ್ತೇವೆ. ನಮ್ಮ ಪಕ್ಷ ಇಂತಹದ್ದನ್ನ ಸಹಿಸಲ್ಲ. ಮಾಧ್ಯಮದಲ್ಲಿ ಸಿಡಿ ವಿಚಾರ ನೋಡಿರುವೆ. ಆದ್ರೆ ವಿಸ್ಕೃತವಾಗಿ ಸಿಡಿ ನೋಡುವ ಬಯಕೆ ಇಲ್ಲ. ಸಿಎಂ ಹಾಗೂ ಪಕ್ಷದ ಅಧ್ಯಕ್ಷರ ಜೊತೆ ಚರ್ಚೆ ಮಾಡಿ. ಎಲ್ಲವನ್ನೂ ಗಮನಿಸಿ ಕ್ರಮ ಕೈಗೊಳ್ಳುತ್ತೇವೆ. ಸಂಶಯಕ್ಕೆ ಆಸ್ಪದ ಕೊಡದಂತೆ ಸಾರ್ವಜನಿಕ ಜೀವನದಲ್ಲಿ ಬದುಕಬೇಕು. ಪಕ್ಷಕ್ಕೆ ಇದೂ ಮುಜುಗರ ತರುವ ಸನ್ನಿವೇಶವಾಗಿದೆ ಎಂದು ಜೋಶಿ ಹೇಳಿದರು.


Spread the love

Leave a Reply

Your email address will not be published. Required fields are marked *

You may have missed