ಪಟ್ಟಣಪಂಚಾಯತಿ-ನಗರಸಭೆ ಮೀಸಲಾತಿ ಪ್ರಕಟ
ಬೆಂಗಳೂರು: ಕಳೆದ ಒಂದು ವರ್ಷದ ಹಿಂದೆ ನಡೆದಿರುವ ಪಟ್ಟಣ ಪಂಚಾಯತಿ ಮತ್ತು ನಗರಸಭೆಯ ಮೀಸಲಾತಿಯನ್ನ ರಾಜ್ಯ ಸರಕಾರ ಪ್ರಕಟಸಿದ್ದು, ಕೆಲವೊಂದು ತಿದ್ದುಪಡಿಗಳನ್ನೂ ಮಾಡಲಾಗಿದೆ.
ಈ ಹಿಂದೆ ಕೆಲವು ನಗರಸಭೆ ಮತ್ತು ಪಟ್ಟಣ ಪಂಚಾಯತಿ ಮೀಸಲಾತಿಯಲ್ಲಿ ತೊಂದರೆಗಳು ಬಂದ ಹಿನ್ನೆಲೆಯಲ್ಲಿ ಕೆಲವರು ನ್ಯಾಯಾಲಯಕ್ಕೆ ಹೋಗಿದ್ದರು. ಈಗ ಸರಕಾರ ಮತ್ತೆ ಹೊಸ ಮೀಸಲಾತಿಯನ್ನ ಪ್ರಕಟ ಮಾಡಿದೆ.
ಕಲಘಟಗಿಗೆ ಅಧ್ಯಕ್ಷ ಸ್ಥಾನ ಜನರಲ್ ಪುರುಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡದ ಮಹಿಳೆ ಎಂದು ಮೀಸಲಾತಿಯನ್ನ ಪ್ರಕಟ ಮಾಡಲಾಗಿದೆ. ನವಲಗುಂದಕ್ಕೆ ಈ ಹಿಂದಿನ ಸಾಮಾನ್ಯ ಅಧ್ಯಕ್ಷ ಸ್ಥಾನ, ಸಾಮಾನ್ಯ ಮಹಿಳೆ ಉಪಾಧ್ಯಕ್ಷ ಸ್ಥಾನ ಮೀಸಲು ಮಾಡಿದೆ.
ವಿವಿಧ ನಗರಸಭೆಯ ಮಾಹಿತಿಯಿಲ್ಲಿದೆ ನೋಡಿ..