ಪಾಸಿಟಿವ್ ಎಂದಿದ್ದ ಪೇದೆಯ ವರದಿ ನೆಗೆಟಿವ್: ಬೆಚ್ಚಿಬಿದ್ದ ಜಿಲ್ಲೆಯೀಗ ನಿರಾಳ
1 min readಚಾಮರಾಜನಗರ: ಪೇದೆಯ ವರದಿ ನೆಗೆಟಿವ್, ಹಸಿರು ವಲಯ ಚಾಮರಾಜನಗರ ನಿರಾಳವಾಗಿದೆ. ಆರೋಗ್ಯ ಇಲಾಖೆಯಿಂದ ಆಗಿದ್ದ ಬಾರಿ ಯಡವಟ್ಟಿನಿಂದ ಜಿಲ್ಲೆಯ ಜನ ಬೆಚ್ಚಿ ಬಿದ್ದಿದ್ದರು. ಆತಂಕಕ್ಕೆ ಕಾರಣವಾಗಿದ್ದ P-650 ವರದಿ ನೆಗೆಟಿವ್, ಆರೋಗ್ಯ ಇಲಾಖೆ ಮಾಹಿತಿ.
ಗ್ರೀನ್ ಜೋನ್ ಚಾಮರಾಜನಗರಕ್ಕೆ ಸೋಂಕಿತ ಪೊಲೀಸ್ ಪೇದೆ ಪಾಸಿಟಿವ್ ಬಂದ ವಿಚಾರ ಆತಂಕಕ್ಕೆ ಕಾರಣವಾಗಿತ್ತು. ಚೆಕ್ ಪೋಸ್ಟ್ ಸಿಬ್ಬಂದಿ, ಹನೂರು ತಾಲೂಕಿನ ಬೆಳ್ತೂರು ಗ್ರಾಮದ ಪೇದೆಯ ಸಂಬಂಧಿಕರು ಸೇರಿದಂತೆ ಒಟ್ಟು 38 ಮಂದಿಯನ್ನು ಕ್ವಾರೆಂಟೇನ್ ಮಾಡಲಾಗಿತ್ತು. ಪೇದೆಯ ವರದಿ ನೆಗೆಟಿವ್, ಬೆಟ್ಟದಂತೆ ಬಂದ ದುಃಖ ಮಂಜಿನಂತೆ ಕರಗಿತು ಎಂಬ ನಿರಾಳ ಸ್ಥಿತಿ.
ಪೇದೆಯ ಗಂಟಲ ದ್ರವ ಸಂಗ್ರಹಿಸಿದ್ದ ಕೇಂದ್ರವು ಒಂದೇ ಹೆಸರಿನಲ್ಲಿದ್ದ ಮಾದರಿಗಳನ್ನು ಕಳುಹಿಸುವಾಗ ಆದ ತಪ್ಪಿನಿಂದಾಗಿದ್ದ ಎಡವಟ್ಟು ನಡೆದಿತ್ತು. ವರದಿಯ ದಾಖಲೆಗಳು ಬದಲಾಗಿದ್ದರಿಂದ ಈ ಲೋಪವಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.