ಧಾರವಾಡ ಜಿಲ್ಲೆಯಲ್ಲಿ “ಜೋಶಿ-ಶೆಟ್ಟರ” ಮೀರಿ ನಿಲ್ಲುವ ಪ್ರಯತ್ನಕ್ಕೆ ಇಳಿದ್ರಾ ಶಾಸಕ ಅರವಿಂದ ಬೆಲ್ಲದ್….. !?
1 min readಧಾರವಾಡ: ರಾಜ್ಯ ರಾಜಕಾರಣದಲ್ಲಿ ಪ್ರತಿ ದಿನವೂ ಒಂದಿಲ್ಲಾ ಒಂದು ವದಂತಿಗಳು ಹಬ್ಬುತ್ತಿವೆಯಾದರೂ, ಅದು ಧಾರವಾಡ ಜಿಲ್ಲೆಯಲ್ಲಿ ಯಾವುದೇ ಥರದ ಮಾತಿಗೆ ಅವಕಾಶವನ್ನ ನೀಡಿರಲಿಲ್ಲ. ಆದರೆ, ಇದೀಗ ಧಾರವಾಡ ಜಿಲ್ಲೆಯಲ್ಲಿ ಪಕ್ಷದ ಕೇಂದ್ರದ ಮಂತ್ರಿ ಹಾಗೂ ರಾಜ್ಯದ ಸಚಿವರನ್ನ ಮೀರಿ, ಶಾಸಕ ಅರವಿಂದ ಬೆಲ್ಲದ ನಡೆದುಕೊಳ್ಳಲು ಆರಂಭಿಸಿದ್ರಾ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರತೊಡಗಿವೆ.
ರಾಜ್ಯ ರಾಜಕಾರಣದಲ್ಲಿ ಏನೇ ಆಗಿದ್ದರೂ, ಧಾರವಾಡ ಜಿಲ್ಲೆಯಲ್ಲಿ ಪಕ್ಷವನ್ನ ‘ಹಕ್ಕ-ಬುಕ್ಕ’ ರಂತೆ ಬೆಳೆಸಿಕೊಂಡು ಬಂದಿದ್ದು ಜಗದೀಶ ಶೆಟ್ಟರ ಮತ್ತು ಪ್ರಲ್ಹಾದ ಜೋಶಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಆದರೆ, ಈಗ ನಡೆಯುತ್ತಿರುವ ಬೆಳವಣಿಗೆಗಳು ಹಲವು ಅನುಮಾನಕ್ಕೆ ಕಾರಣವಾಗುತ್ತಿದೆ.
ಶಾಸಕ ಅರವಿಂದ ಬೆಲ್ಲದ ಅವರು, ಪ್ರಲ್ಹಾದ ಜೋಶಿ ಮತ್ತು ಜಗದೀಶ ಶೆಟ್ಟರ ಅವರಿಗೆ ಪರ್ಯಾಯ ನಾಯಕರಾಗಿ ಬೆಳೆಯುವ ಪ್ರಯತ್ನಕ್ಕೆ ಮುಂದಾಗಿದ್ದಾರಾ ಅಥವಾ ಇವರಿಬ್ಬರು ಕೂಡಿಕೊಂಡು ಹೀಗೆ ಮಾಡಿಸುತ್ತಿದ್ದಾರಾ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರತೊಡಗಿವೆ.
ಇದಕ್ಕೆ ಕಾರಣಗಳೂ ಆಗಿಂದಾಗೇ ನಡೆಯುತ್ತಲೇ ಇವೆ. ಅವಳಿನಗರದ ಮಧ್ಯದ ಬಿಆರ್ ಟಿಎಸ್ ಕಾಮಗಾರಿ, ನನ್ನ ಮಹತ್ವಾಕಾಂಕ್ಷೆಯದ್ದು ಎಂದು ಶೆಟ್ಟರ ಹೇಳಿದಾಗ, ಕಾಮಗಾರಿ ಸ್ವರೂಪವೇ ಸರಿಯಿಲ್ಲವೆಂದು ಶಾಸಕ ಅರವಿಂದ ಬೆಲ್ಲದ ಹೇಳುತ್ತಲೇ ಬಂದಿದ್ದಾರೆ.
ಇದೀಗ, ಶೆಟ್ಟರ ಹಾಗೂ ಜೋಶಿಯವರಿಗೆ ಗೊತ್ತಿಲ್ಲದೇ ದೆಹಲಿ ರಾಜಕಾರಣಕ್ಕೆ ಅರವಿಂದ ಬೆಲ್ಲದ ಮುಂದಾಗಿರುವುದು ಕೂಡಾ ಮತ್ತಷ್ಟು ಗೊಂದಲವನ್ನ ಸೃಷ್ಠಿ ಮಾಡಿವೆ. ರಾಜಕಾರಣದಲ್ಲಿ ಏನಾದರೂ ನಡೆದು ಬಿಡಬಹುದೆಂದು ಹೇಳಲಾಗುತ್ತದೆಯಾದರೂ, ಧಾರವಾಡ ಜಿಲ್ಲೆಯಲ್ಲಿ ಶೆಟ್ಟರ-ಜೋಶಿ ಹೊರತುಪಡಿಸಿ, ‘ದಿಲ್ಲಿ ರಾಜಕೀಯ’ ಶುರುವಾಗಿದೆ.
ಅರವಿಂದ ಬೆಲ್ಲದ ಅವರ ಈ ನಡೆ, ‘ಒಂದು ಶೆಟ್ಟರ-ಜೋಶಿ ಅವರನ್ನ’ ಹೊರತು ಪಡಿಸಿ ನಾಯಕತ್ವಕ್ಕೆ ಮುಂದಾಗಿರಬೇಕು. ಇಲ್ಲವೇ ಈ ಎಲ್ಲ ಬೆಳವಣಿಗೆಗೂ ಈ ನಾಯಕರಿಬ್ಬರು ಸಾಥ್ ನೀಡಿರಬೇಕೆಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರತೊಡಗಿವೆ. ಸತ್ಯವನ್ನ ‘ಸತ್ಯದ’ ರಾಜಕೀಯ ಜನರೇ ಹೇಳಬೇಕು.