ಹಿಂಡಸಗೇರಿ, ಶಾಕೀರ, ಇಸ್ಮಾಯಿಲ್ ಗೆ ಟಿಕೆಟ್ ಸಿಗದಿರೋಕೆ ಕಾರಣವೇನು ಗೊತ್ತಾ….!?
1 min readಬೆಂಗಳೂರು: ಧಾರವಾಡ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಚುನಾವಣೆಯಲ್ಲಿ ಹುಬ್ಬಳ್ಳಿ-ಧಾರವಾಡದ ಮುಸ್ಲಿಂ ನಾಯಕರಿಗೆ ಟಿಕೆಟ್ ಸಿಗದೇ ಇರುವುದಕ್ಕೆ ನಿಖರವಾದ ಕಾರಣವೇನು ಎಂಬ ಮಾಹಿತಿಯಿಲ್ಲಿದೆ ನೋಡಿ.
ಸಲೀಂ ಅಹ್ಮದ ಅವರ ಬಗ್ಗೆ ನಿಮಗಿಲ್ಲಿದೆ ಮಾಹಿತಿ…
ವಿಧಾನಪರಿಷತ್ ಚುನಾವಣೆ ನಡೆಯುತ್ತಿರುವುದು ಅಖಂಡ ಧಾರವಾಡ ಜಿಲ್ಲೆಯಲ್ಲಿ. ಹಾಗಾಗಿಯೇ ಹುಬ್ಬಳ್ಳಿ-ಧಾರವಾಡದ ಮುಸ್ಲಿಂ ನಾಯಕರಿಗೆ ಮಾತ್ರ ಟಿಕೆಟ್ ಕೊಡಬೇಕಾ ಎಂಬುದೇ ಮೂಲ ಪ್ರಶ್ನೆಯಾಗಿತ್ತಂತೆ.
ಮಾಜಿ ಸಚಿವ ಎ.ಎಂ.ಹಿಂಡಸಗೇರಿಯವರು ಮೊದಲು ವಯಸ್ಸಿನ ಆಧಾರದ ಮೇಲೆ ರಿಜೆಕ್ಟ್ ಆಗಿದ್ದಾರೆ. ಇದಾದ ನಂತರ ಉಳಿದಿದ್ದು ಶಾಕೀರ ಸನದಿಯವರು. ಶಾಕೀರ ಸನದಿಯವರು ಇಲ್ಲಿಯವರೆಗೆ ಒಂದೇ ಒಂದು ಚುನಾವಣೆಯನ್ನ ಎದುರಿಸಿಲ್ಲ.
ಇನ್ನೂ ಧಾರವಾಡದ ಇಸ್ಮಾಯಿಲ ತಮಾಟಗಾರ, ಈಗಾಗಲೇ ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ನಿಂತು ಸೋತಿದ್ದಾರೆ. ಯಾರೂ ವಿಧಾನಸಭಾ ಚುನಾವಣೆಯಲ್ಲಿ ನಿಲ್ಲುತ್ತಾರೋ, ಅವರಿಗೆ ಎಂಎಲ್ಸಿಗೆ ಅವಕಾಶವಿರೋದಿಲ್ಲ ಎಂಬುದು ಕಾಂಗ್ರೆಸ್ ನಿರ್ಧಾರವಾಗಿತ್ತು. ಹಾಗಾಗಿಯೇ, ಸಲೀಂ ಅಹ್ಮದರಿಗೆ ಟಿಕೆಟ್ ನೀಡಲಾಗಿದೆ.
ಸಲೀಂ ಅಹ್ಮದ ಅವರು ಕಳೆದ 40 ವರ್ಷದಿಂದ ರಾಜಕಾರಣದಲ್ಲಿದ್ದಾರೆ. ಎರಡು ಬಾರಿ ವಿಧಾನಪರಿಷತ್ ಸದಸ್ಯರಾಗಿದ್ದಾರೆ. ಅಷ್ಟೇ ಅಲ್ಲ, ಮುಖ್ಯ ಸಚೇತಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಇದೇಲ್ಲಕ್ಕಿಂತಲೂ ವಿಶೇಷವಾಗಿದ್ದೇನು ಎಂದರೇ, ಹಾವೇರಿ ಹಾಗೂ ಗದಗನಲ್ಲಿ ಮುಸ್ಲಿಂರಿಗೆ ನಿಲ್ಲುವ ಅವಕಾಶಗಳೇ ಇಲ್ಲಾ. ಹೀಗಾಗಿಯೇ ಸಲೀಂ ಅಹ್ಮದರನ್ನ ಅಖಂಡ ಧಾರವಾಡ ಜಿಲ್ಲೆಯ ಹುರಿಯಾಳಾನ್ನಾಗಿ ಕಾಂಗ್ರೆಸ್ ಮಾಡಿದೆ.
ಈ ಸತ್ಯವನ್ನ ಹುಬ್ಬಳ್ಳಿ-ಧಾರವಾಡದ ಕಾಂಗ್ರೆಸ್ ನ ಪ್ರಮುಖರು ಮತ್ತು ಕಾರ್ಯಕರ್ತರು ತಿಳಿದುಕೊಳ್ಳಬೇಕಿದೆ.