Posts Slider

Karnataka Voice

Latest Kannada News

ಅಣ್ಣಿಗೇರಿ ಪೊಲೀಸ್ ಠಾಣೆಯ “ಪೊಲೀಸ್ ಜೀಪ್”ನ್ನೇ ಎಗರಿಸಿದ ಕಿಲಾಡಿ…

Spread the love

ಅಣ್ಣಿಗೇರಿ: ಪಟ್ಟಣದ ಪೊಲೀಸ್ ಠಾಣೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಪೊಲೀಸ್ ಜೀಪ್ ನ್ನೇ ಕಿಲಾಡಿಯೊಬ್ಬ ಎಗರಿಸಿ, ಸಿಕ್ಕಿ ಬಿದ್ದಿರುವ ಪ್ರಕರಣ ಬೆಳಕಿಗೆ ಬಂದಿದೆ.

ಸಾಂದರ್ಭಿಕ ಚಿತ್ರ

ಈ ಬಗ್ಗೆ ಪೊಲೀಸ್ ಠಾಣೆಯ ಮಾಹಿತಿ‌ ಇಲ್ಲಿದೆ ನೋಡಿ…

ಜಿಲ್ಲೆಯ ಅಣ್ಣಿಗೇರಿ ಪೊಲೀಸ್ ಠಾಣೆಗೆ ಸರಕಾರಿ ಕರ್ತವ್ಯಗಳನ್ನು ನಿರ್ವಹಿಸಲು ಅಂತಾ ಇಲಾಖೆಯಿಂದ ನೀಡಿದ ಬೊಲೆರೋ ಕಂಪನಿಯ ಸರಕಾರಿ ಜೀಪ್ ನಂಬರ್ KA-25/G 0861 ನೇದ್ದನ್ನು ಠಾಣೆಯ ಸರಕಾರಿ ಕೆಲಸಕ್ಕೆ ಉಪಯೋಗ ಮಾಡಿಕೊಂಡು ಬಂದಿದ್ದು ದಿನಾಂಕ 01-02-2022 ರಂದು ನಸುಕಿನ 03-30 ಗಂಟೆಯಿಂದ 04-00 ಗಂಟೆಯ ನಡುವಿನ ಅವಧಿಯಲ್ಲಿ ಅಣ್ಣಿಗೇರಿ ಪೊಲೀಸ್ ಠಾಣೆಯ ಆವರಣದಲ್ಲಿ ನಿಲ್ಲಿಸಿದ ಸದರ ಬೊಲೆರೋ ಕಂಪನಿಯ ಸರಕಾರಿ ಜೀಪ್ ನಂಬರ್ KA-25/G 0861 ಅಃಕಿ 12,50,000/- ರೂ ನೇದ್ದನ್ನು ಆರೋಪಿತನಾದ ನಾಗಪ್ಪ ತಂದೆ ಯಲ್ಲಪ್ಪ ಹಡಪದ, ವಯಾ 45 ವರ್ಷ ಸಾಃ ಅಣ್ಣಿಗೇರಿ, ಅಂಬಿಕಾ ನಗರ ತಾಃ ಅಣ್ಣಿಗೇರಿ ಈತನು ಕಳ್ಳತನ ಮಾಡಿಕೊಂಡು ಹೋಗಿರುವ ಫಿಯಾಧೀ ನೀಡಿದ್ದುಇರುತ್ತದೆ. ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿಗುನ್ನಾನಂ 20/2022 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

ಪೊಲೀಸ್ ದೂರು ದಾಖಲಿಸಿಕೊಂಡ ಮೇಲೆ ಪೊಲೀಸ್ ವಾಹನ ಬ್ಯಾಡಗಿ ಬಳಿ ಪತ್ತೆಯಾಗಿದೆ. ಪೊಲೀಸರ ವಾಹನವನ್ನ ಚಲಾಯಿಸುವ ಉಮೇದಿ ಹೊಂದಿದ್ದ ನಾಗಪ್ಪನನ್ನೂ ಪೊಲೀಸರು ಬಂಧನ ಮಾಡಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed