ಹುಬ್ಬಳ್ಳಿ-ಧಾರವಾಡದಲ್ಲಿ ಪೊಲೀಸ್ ಇನ್ಸಪೆಕ್ಟರ್‌ಗಳ ವರ್ಗಾವಣೆ- ಡಿಸೋಜಾ, ತಹಶೀಲ್ದಾರ, ದಿಡಿಗನಾಳ, ಕಾಡದೇವರಮಠ ಸೇರಿ ಹಲವರ ಟ್ರಾನ್ಸಪರ್…

ಬೆಂಗಳೂರು: ರಾಜ್ಯದಲ್ಲಿ ಬರೋಬ್ಬರಿ 131 ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಹುಬ್ಬಳ್ಳಿ ಧಾರವಾಡದಲ್ಲಿ ಬಹಳಷ್ಟು ಬದಲಾವಣೆ ನಡೆದಿದೆ.
ಹುಬ್ಬಳ್ಳಿಯ ಸಂಚಾರಿ ಠಾಣೆಯಲ್ಲಿ ಡಿಸೋಜಾ ಅವರನ್ನ ವಿದ್ಯಾನಗರ ಠಾಣೆಗೆ, ಹುಬ್ಬಳ್ಳಿ ಶಹರ ಠಾಣೆಯಲ್ಲಿದ್ದ ತಹಶೀಲ್ದಾರ ಅವರನ್ನ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ನಾಗೇಶ ಕಾಡದೇವರಮಠ ರಾಣೆಬೆನ್ನೂರಿಗೆ, ಶಿವಯೋಗಿ ಅವರನ್ನ ಗರಗ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಸೈಬರ್ ಠಾಣೆಯಲ್ಲಿದ್ದ ಬಿ.ಕೆ.ಪಾಟೀಲ ಸಕಲೇಶಪುರಕ್ಕೆ ವರ್ಗಾವಣೆಗೊಂಡಿದ್ದಾರೆ.