ಮಗನ ಕಿರುಕುಳ ತಪ್ಪಿಸಿಕೊಳ್ಳಲು ಬಂದವನಿಗೆ, ಪೊಲೀಸರಿಂದಲೂ ಕಿರುಕುಳ: ಠಾಣೆಯದುರೇ ಆತ್ಮಹತ್ಯೆಗೆ ಶರಣು
1 min readಬೀದರ್ : ಮಗನ ಕಿರುಕುಳಕ್ಕೆ ಬೇಸತ್ತ ತಂದೆ ಪೊಲೀಸ್ ಠಾಣೆಗೆ ದೂರು ಕೊಡಲು ಬಂದಿದ್ದರು. ಆದರೆ, ಪೊಲೀಸರು ದೂರು ತೆಗೆದುಕೊಳ್ಳಲು ತಡಮಾಡಿದ್ದಕ್ಕೆ ನೊಂದ ತಂದೆ, ಪೊಲೀಸ್ ಠಾಣೆ ಎದುರೆ ಆಲದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಂತಹ ಘಟನೆ ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಹಳ್ಳಿಖೇಡ್‌ನಲ್ಲಿ ನಡೆದಿದೆ.
ಗ್ರಾಮದ 60 ವಯಸ್ಸಿನ ಶರಣಪ್ಪ ಎಂಬುವರು ಇಂದು ಮಗನ ಕಿರುಕುಳಕ್ಕೆ ಬೇಸತ್ತು ಮಗನಿಗೆ ಬುದ್ದಿ ಕಲಿಸಲು ಪೊಲೀಸ್ ಠಾಣೆಗೆ ತೆರಳಿದ್ದರು. ಆದರೆ, ಈ ವೇಳೆ ಶರಣಪ್ಪನ ದೂರು ತೆಗೆದುಕೊಳ್ಳಲು ಪೊಲೀಸರು ವಿಳಂಬ ಮಾಡಿದ್ದಾರೆ.. ಇದಕ್ಕೆ ಬೇಸತ್ತ ಶರಣಪ್ಪ, ಠಾಣೆ ಎದುರಿಗಿನ ಆಲದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಗನ ಕಿರುಕುಳ ತಾಳಲಾರದೇ ಠಾಣೆಗೆ ಬಂದ ಶರಣಪ್ಪನಿಗೆ ಪೊಲೀಸರ ವಿಳಂಬತನವೂ ಕಿರುಕುಳವಾಗಿ ಕಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ದೂರು ಕೊಡಲು ಬಂದ ಠಾಣೆಯಲ್ಲಿಯೇ ಪ್ರಕರಣ ದಾಖಲಾಗಿದೆ.