ಮತ್ತದೇ ಠಾಣೆಯಲ್ಲಿ ಪಿಎಸ್ಐ, ಇನ್ಸಪೆಕ್ಟರ್ ಸಿಬ್ಬಂದಿ ಎದುರೇ ಹಾಕ್ಯಾಟ..!
1 min readಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ಮರಳು ದಂಧೆಯ ಹಣದಿಂದ ಏನೇಲ್ಲಾ ನಡೆಯುತ್ತಿದೆ ಎಂಬುದಕ್ಕೆ ಪೊಲೀಸ್ ಠಾಣೆಯಲ್ಲೇ ಇಬ್ಬರು ಅಧಿಕಾರಿಗಳು, ಮುಖಾಮುಖಿ ಬೈಯ್ದಾಡಿಕೊಂಡ ಘಟನೆ ನಡೆದಿದೆ.
ಹೊಸದಾಗಿ ಬಂದಿರುವ ಪಿಎಸ್ಐ ಅವರಿಗೆ ಮೆನ್ ಗಳನ್ನ ಕೊಡದೇ ತಮ್ಮ ಮಾಮೂಲಿಗೆ ಕೆಲವರನ್ನ ಫಿಕ್ಸ್ ಮಾಡಿಕೊಂಡು ಡ್ಯೂಟಿ ಮಾಡಿಸುತ್ತಿರುವ ಇನ್ಸಪೆಕ್ಟರ್ ‘ಹೊಸ’ದಾಗಿ ಬಂದ ಪಿಎಸ್ಐ ಒಬ್ಬರು ‘ಪೇಟೆ’ಯಲ್ಲೇ ಮಾನ ತೆಗೆದಿದ್ದಾರಂತೆ.
ಕೆಲವು ಇನ್ಸಪೆಕ್ಟರಗಳು ಉದ್ದೇಶಪೂರ್ವಕವಾಗಿ ಕೆಲವರನ್ನ ಫಿಕ್ಸ್ ಜಾಗಕ್ಕೆ ಹಾಕುವುದು ಮತ್ತೂ ಅವರಿಂದ ವಸೂಲಿ ಮಾಡಿಸುವುದು ಇನ್ನೂ ಕಡಿಮೆಯಾಗುತ್ತಲೇ ಇಲ್ಲ. ಒಂದೊಂದು ಜಾಗಕ್ಕೆ ಒಂದೊಂದು ರೇಟ್ ಫಿಕ್ಸ್ ಮಾಡಿದ್ದು ನಂಗೆ ಗೊತ್ತಿದೆ ಎಂದು ಎಲ್ಲರೆದುರಿಗೆ ಹೊಸ ಪಿಎಸ್ಐ ಹೇಳಿದ್ದು, ಹೆಸರಲ್ಲಷ್ಟೇ ‘ಹೊಸ’ತನವಿಟ್ಟುಕೊಂಡಿರುವ ಇನ್ಸಪೆಕ್ಟರ್, ಏನ್ ಮಾಡಕೋತಿ ಮಾಡಕೋ ಹೋಗ್ ಎಂದು ಆವಾಜ್ ಹಾಕಿರೋ ಸುದ್ದಿ ಚೆನ್ನಮ್ಮ ವೃತ್ತದ ಸುತ್ತಲೂ ತಿರುಗಾಡುತ್ತಿದೆ.
ಮರಳು ದಂಧೆಗೆ ಕಡಿವಾಣ ಹಾಕಿದರೂ ಕೆಲವು ಇನ್ಸಪೆಕ್ಟರ್ ಗಳು ಸಿಬ್ಬಂದಿಗಳ ಕೈಗೆ ಮಷೀನ್ ಕೊಟ್ಟು ಸಂಜೆ ಹಣ ಎಣಿಸುತ್ತಿರುವುದು ಎಲ್ಲರಿಗೂ ಗೊತ್ತಾಗುತ್ತಿದೆ. ಹೊಸಬರಿಗೆ ಉತ್ತಮ ಕರ್ತವ್ಯನಿಷ್ಠೆ ತೋರಿಸಬೇಕಾದವರೂ, ಹೀಗೆ ಬೀದಿಯಲ್ಲಿ ನಿಂತು.. ‘ಹೌದು.. ಮುಂದೇನು..?” ಎನ್ನುವವರಿಗೆ ಹಿರಿಯ ಅಧಿಕಾರಿಗಳು ಪಾಠ ಮಾಡಬೇಕಿದೆ.