ಇಸ್ಪೀಟ್: ಬಿಜೆಪಿ ಪ್ರಮುಖನ ಬಂಧನ- 10 ಪೊಲೀಸರೇ ಪರಾರಿ- ರೇಡ್ ಹೀಗೂ ಆಗತ್ತೆ..!
1 min readಧಾರವಾಡ: ತಾಲೂಕಿನ ಮುಮ್ಮಿಗಟ್ಟಿ ಬಳಿಯಿರುವ ನೀಲಕಮಲ ಹೊಟೇಲ್ ಹತ್ತಿರವಿರುವ ಉಡುಪಿ ಹೊಟೇಲ್ ಹಿಂದಿರುವ ಕೋಣೆಯಲ್ಲಿ ಜೂಜಾಟವಾಡುತ್ತಿದ್ದವರ ಮೇಲೆ ದಾಳಿ ಮಾಡಿರುವ ಜಿಲ್ಲಾ ಪೊಲೀಸರು, ಓರ್ವ ಬಿಜೆಪಿ ಪ್ರಮುಖರನ್ನ ಬಂಧನ ಮಾಡಿದ್ದು, 10ಕ್ಕೂ ಹೆಚ್ಚು ಪೊಲೀಸರು ಪರಾರಿಯಾದ ಘಟನೆ ನಡೆದಿದೆ.
ಗರಗ ಗ್ರಾಮದ ಅನಿಲ ಚಂದ್ರಶೇಖರ ಉಳವಣ್ಣನವರ ಬಂಧಿತರಾಗಿದ್ದು, ಇನ್ನುಳಿದಂತೆ ಡಿಎಆರ್ ಪೇದೆ ಮೈನುದ್ಧೀನ ಮುಲ್ಲಾ, ಗರಗ ಠಾಣೆಯ ಪೇದೆಗಳಾದ ಆತ್ಮಾನಂದ ಬೆಟಗೇರಿ, ಮಂಜುನಾಥ ನಾಗಾವಿ, ಡಿಎಆರ್ ಧಾರವಾಡದ ಶಂಕರ ಭಜಂತ್ರಿ, ಬಸವರಾಜ ಮಠದ, ವರ್ಧಮಾನ ಹಟಿಂಗಳಿ, ಆರ್.ಎಸ್.ಜಂಗನವರಿ, ಹುಲಿಗೆಪ್ಪ ದೊಡ್ಡಮನಿ ಹಾಗೂ ಮಲ್ಲಿಕಾರ್ಜುನ ಶಿರೂರ ಜೊತೆಗೆ ಇನ್ನೂ ನಾಲ್ವರು ಪರಾರಿಯಾಗಿದ್ದಾರೆ.
ಬಂಧಿತ ವ್ಯಕ್ತಿಯಿಂದ 35050 ನಗದು, ಇಸ್ಪೀಟ್ ಎಲೆ, ಮೊಬೈಲ್ ಹಾಗೂ 5 ಬೈಕಗಳನ್ನ ವಶಕ್ಕೆ ಪಡೆಯಲಾಗಿದ್ದು, ಪರಾರಿಯಾಗಿರುವ ಪೊಲೀಸರನ್ನ ಪೊಲೀಸರು ಹುಡುಕುತ್ತಿದ್ದಾರೆ.
ಡಿಎಸ್ಪಿ ರವಿ ನಾಯಕ ನೇತೃತ್ವದಲ್ಲಿ ನಡೆದಿರುವ ಕಾರ್ಯಾಚರಣೆಯ ಪ್ರಕರಣ ಗರಗ ಠಾಣೆಯಲ್ಲಿ ದಾಖಲು ಮಾಡಲಾಗಿದೆ. ಈ ಘಟನೆಯಿಂದ ಕಳ್ಳರು ಯಾರೂ ಸುಳ್ಳರು ಯಾರೂ ಎನ್ನುವುದು ಗೊತ್ತಾಗಿದೆ ಎಂದು ಹಲವರು ಮಾತನಾಡಿಕೊಳ್ಳುವಂತಾಗಿದೆ.