ಚೆಕ್ ಫೋಸ್ಟ್ ನಲ್ಲಿ ಪೊಲೀಸ್ ಪೇದೆ ಹಲ್ಲೆಗೆ ಯತ್ನ: ಆಪಾದಿತ ಪೊಲೀಸ್ ವಶಕ್ಕೆ

ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪಾತಪ್ಪನಗುಡಿ ಚೆಕ್ ಪೋಸ್ಟ್ ಡ್ಯೂಟಿಯಲ್ಲಿದ್ದ ಪೇದೆ ಶಿವಣ್ಣ ಹಾಗೂ ನೀರಗಂಟಿ ಮೇಲೆ ಹಲ್ಲೆಗೆ ಅನಂತಪುರ ಜಿಲ್ಲೆಯ ಕಲ್ಯಾಣದುರ್ಗ ತಾಲೂಕಿನ ಶೆಟ್ಟೂರು ಗ್ರಾಮದ ಕಾಂತರಾಜ ಹಲ್ಲೆಗೆ ಯತ್ನಿಸಿದ್ದಾನೆ.
ಕಾಂತರಾಜ್ ಮತ್ತು ಸ್ನೇಹಿತರ ಶೆಟ್ಟೂರು ಗ್ರಾಮಕ್ಕೆ ತೆರಳವಾಗ ಪೇದೆ ಪರಿಶೀಲನೆ ಮಾಡಲು ಮುಂದಾದಾಗ ಎಣ್ಣೆಯ ಮತ್ತಿನಲ್ಲಿ ಪೇದೆ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಹಲ್ಲೆಗೆ ಯತ್ನಿಸಿದ ಆರೋಪಿ ಕಾಂತರಾಜ್ ಪೊಲೀಸರ ವಶಕ್ಕೆ ಪಡೆಯಲಾಗಿದ್ದು, ಪರಶುರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.