Posts Slider

Karnataka Voice

Latest Kannada News

ಹುಬ್ಬಳ್ಳಿ ಪೊಲೀಸಪ್ಪನ ಪ್ರಣಯ ಪ್ರಸಂಗ- ಶಂಬೋ ಶಂಬೋ…!

1 min read
Spread the love

ಹುಬ್ಬಳ್ಳಿ: ಪ್ರೀತಿ ಮಾಡಬಾರದು. ಮಾಡಿದರೇ ಜಗಕ್ಕೆ ಹೆದರಬಾರದು. ಬೆದರಿಸಿದರೂ ಪೊಲೀಸರ ಬಳಿ ಹೋಗಬಹುದೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಆದರೆ, ಅದೇ ಪೊಲೀಸಪ್ಪ, ಮನಸ್ಸು ಕದ್ದು ಕನಸು ಕಾಣು ಎಂದು ಹೊರಟರೇ, ಆಕೆ ಸುಮ್ಮನಿದ್ದಾಳಾ.. ಇಂಪಾಸಿಬಲ್..

ಆಕೆ ಹುಬ್ಬಳ್ಳಿ ಠಾಣೆಯೊಂದರ ಪೇದೆಯ ಪ್ರೇಮದಲ್ಲಿ ಸಿಲುಕಿ ವಿಹರಿಸಿದ್ದಾಳೆ. ಮದುವೆಯಾಗುವ ಭರವಸೆಯನ್ನೇ ಬೆಳಕೆಂದು ತಿಳಿದುಕೊಂಡು ಆತನೊಂದಿಗೆ ಕೈ ಕೈ ಹಿಡಿದು ಅಲೆದಾಡಿದ್ದಳು.

ಇದೀಗ, ಆಕೆಯನ್ನ ಆತ ಈಗ ಮರೆಯುವಂತೆ ನಾಟಕ ಮಾಡಲು ಆರಂಭಿಸಿದ್ದಾನೆ. ಅದೇ ಕಾರಣಕ್ಕೆ, ಗಟ್ಟಿಗಿತ್ತಿ ಹುಡುಗಿ ಸೀದಾ ಪೊಲೀಸ್ ಠಾಣೆಗೆ ಬಂದು, ‘ಸರ್. ಇಂವಾ ಮೋಸಾ ಮಾಡಾಕ್ ನಿಂತಾನ್ರೀ. ನನ್ನ್ ಹೆಂಗ್ ಬೇಕ್ ಹಂಗ್ ಬಳಕೆ ಮಾಡ್ ಕೊಂಡಾನ್ರೀ. ನೀವ್ ನ್ಯಾಯಾ ಕೊಡಸ್ರೀ’, ಎಂದು ಬೇಡಿಕೊಂಡಳು.

ಠಾಣೆಯಲ್ಲಿದ್ದ ‘ಚಾರ್ಲಿ’ ಸಾಹೇಬ್ರು, ನೋಡಾವಾ ತಂಗೀ, ಇನ್ನೊಂದ್ ಸಲಾ ನೀವ್ ಇಬ್ರೂ ಕೂಂತ ಸರಿಮಾಡೋಕಾಕ್ ಪ್ರಯತ್ನಾ ಮಾಡ್ರೀ. ಇಲ್ಲಂದ್ರ್, ನಿಮ್ಮ್ ಮನೀ ಏರಿಯಾ ಇರೋ ಪೊಲೀಸ್ ಸ್ಟೇಶನ್ಯಾಗ್, ಕಂಪ್ಲೇಂಟ್ ಕೊಡ್’ ಎಂದು ಹೇಳಿಕಳಿಸಿದ್ದಾರಂತೆ. ಪಾಪ.. ಮದುವೆ ಮಾಡಿಕೊಳ್ಳುವ ಕನಸು ತುಂಬಿ, ಮನಸ್ಸು ಹದಗೆಡಿಸಿದವನಿಗೆ ತಕ್ಕ ಶಾಸ್ತಿ ಮಾಡ್ತೇನಿ ಎಂದುಕೊಳ್ಳುತ್ತಲೇ ಹೊರನಡೆದಳಂತೆ. ಶಂಭೋ ಶಂಕರ.. ನೀನೇ ಕಾಪಾಡಬೇಕು..


Spread the love

Leave a Reply

Your email address will not be published. Required fields are marked *