ಸರವಗೋಳ, ಭರತರೆಡ್ಡಿ, ಪ್ರಭುಗೌಡ, ಶಿವಪ್ರಕಾಶ ಸೇರಿದಂತೆ 25 ಇನ್ಸಪೆಕ್ಟರಗಳಿಗೆ ಪ್ರಮೋಷನ್…!


ಬೆಂಗಳೂರು: ಪೊಲೀಸ್ ಇನ್ಸಪೆಕ್ಟರುಗಳಾಗಿದ್ದ 25 ಅಧಿಕಾರಿಗಳಿಗೆ ಮುಂಬಡ್ತಿಯನ್ನ ನೀಡಿ ಸರಕಾರ ಆದೇಶ ಹೊರಡಿಸಿದ್ದು, ಎಲ್ಲರಿಗೂ ಪೋಸ್ಟಿಂಗ್ ನೀಡಬೇಕಿದೆ.

ಅವಳಿನಗರವೂ ಸೇರಿದಂತೆ ಈ ಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದ ಮುತ್ತಣ್ಣ ಸರವಗೋಳ, ಪ್ರಭುಗೌಡ ಪಾಟೀಲ, ಭರತ ರೆಡ್ಡಿ, ಶಿವಪ್ರಕಾಶ ನಾಯಕ, ಗಿರೀಶ ಬಿ ಸೇರಿದಂತೆ ಒಟ್ಟು 25 ಅಧಿಕಾರಿಗಳಿಗೆ ಮುಂಬಡ್ತಿ ನೀಡಲಾಗಿದೆ.

ಕೆಲವೇ ದಿನಗಳಲ್ಲಿ ಎಲ್ಲ ಅಧಿಕಾರಿಗಳಿಗೂ ಪೊಸ್ಟಿಂಗ್ ನೀಡಲಿದ್ದು, ಹೊಸದಾದ ಜಾಗದಲ್ಲಿ ಕರ್ತವ್ಯ ನಿರ್ವಹಣೆ ಮಾಡಲಿದ್ದಾರೆ. ಮುತ್ತಣ್ಣ ಸರವಗೋಳ ಅವರು ಸಧ್ಯ ಲೋಕಾಯುಕ್ತದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಭರತ ರೆಡ್ಡಿಯವರು ಸಿಸಿಬಿಯಲ್ಲಿ ಕರ್ತವ್ಯವನ್ನ ಮುಂದುವರೆಸಿದ್ದಾರೆ.