“14 ವರ್ಷ” ಕಣ್ತಪ್ಪಿಸಿದ್ದವನನ್ನ “ಅರೆಸ್ಟ್” ಮಾಡಿದ ಸೂಪರ್‌ಕಾಪ್ ಚೆನ್ನಣ್ಣನವರ…!

ಹುಬ್ಬಳ್ಳಿ: ಕಳೆದ ಹದಿನಾಲ್ಕು ವರ್ಷಗಳಿಂದ ಪ್ರಕರಣವೊಂದರ ಆರೋಪಿ ನ್ಯಾಯಾಲಯಕ್ಕೂ ಹೋಗದೆ, ಪೊಲೀಸರ ಕಣ್ತಪ್ಪಿಸಿ ತಿರುಗುತ್ತಿದ್ದವನ್ನ ಬಂಧನ ಮಾಡುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿಯ ಜನತಾ ಬಜಾರದ ಶ್ರೀ ಚಾಂಗದೇವ ಮಹಾರಾಜರ ಗುಡಿ ಹತ್ತಿರದ ನಿವಾಸಿ ಮುಕುಂದಪ್ಪ ಅಲಿಯಾಸ್ ನಾರಾಯಣ ರಾಜು ಓತಾರಿ ಅಲಿಯಾಸ್ ಹೊರಾರಿ ಬಂಧಿತನಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದಾನೆ.
ಅಬಕಾರಿ ಪ್ರಕರಣವೊಂದರ ಆರೋಪಿ ಮುಕುಂದಪ್ಪ, ಹದಿನಾಲ್ಕು ವರ್ಷಗಳಿಂದಲೂ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಅಷ್ಟೇ ಅಲ್ಲ, ಪೊಲೀಸರ ಕಣ್ಣು ತಪ್ಪಿಸಿ ತಿರುಗುತ್ತಿದ್ದ. ಇದೇ ಕಾರಣಕ್ಕೆ ಗ್ರಾಮೀಣ ಠಾಣೆಯ ಇನ್ಸಪೆಕ್ಟರ್ ಮುರುಗೇಶ ಚೆನ್ನಣ್ಣನವರ ವಿಶೇಷ ತಂಡವನ್ನ ರಚನೆ ಮಾಡಿ, ಆರೋಪಿಯನ್ನ ದಸ್ತಗೀರ ಮಾಡಿದ್ದಾರೆ.
ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲಾ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ ಅವರು ಸಿಬ್ಬಂದಿಗಳನ್ನ ಪ್ರಶಂಸಿಸಿ, ಬಹುಮಾನ ಘೋಷಣೆ ಮಾಡಿದ್ದಾರೆ.