Posts Slider

Karnataka Voice

Latest Kannada News

ದಕ್ಷಿಣ ಸಂಚಾರಿ ಠಾಣೆಯಲ್ಲಿ ನಡೆಯುತ್ತಿರುವುದು ಏನು… ಸಿಬ್ಬಂದಿಗಳಿಗೆ ಕೇಳಿರುವ ಮಾಹಿತಿ ಏನು ಗೊತ್ತಾ…!?

Spread the love

ಹುಬ್ಬಳ್ಳಿ: ನಗರದ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿನ ಸಿಬ್ಬಂದಿಗಳಿಗೆ ಕೇಳಿರುವರೆನ್ನಲ್ಲಾದ ಮಾಹಿತಿಯೊಂದು ವೈರಲ್ ಆಗಿದ್ದು, ಇಂತಹ ಸ್ಥಿತಿಗೆ ಆ ಠಾಣೆಯ ಇನ್ಸಪೆಕ್ಟರ್ ಮುಂದಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಹುಬ್ಬಳ್ಳಿ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿನ ಸಿಬ್ಬಂದಿಗಳು ತಮ್ಮ ಪತ್ನಿ/ಪತಿ ಅಥವಾ ಕುಟುಂಬದ ಅವಲಂಬಿತ ಸದಸ್ಯರು ಯಾವುದಾದರೂ ಮಾಧ್ಯಮದಲ್ಲಿ ಸೇವೆ ಮಾಡುತ್ತಿದ್ದರೇ ಅವರ ಹೆಸರು ವಿಳಾಸ, ಪ್ರತಿನಿಧಿಸುತ್ತಿರುವ ಪತ್ರಿಕೆ/ ಮಾಧ್ಯಮದ ಹೆಸರು ಮತ್ತು ಮಾಧ್ಯಮದ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ವರ್ಷ ಈ ಮಾಹಿತಿಯನ್ನ ಲಿಖಿತವಾಗಿ ಕೂಡಲೇ ಠಾಣೆಗೆ ನೀಡಬೇಕೆಂದು ಆದೇಶ ಮಾಡಲಾಗಿರುವ ಪತ್ರವೊಂದು ವಾಟ್ಸಾಫ್ ಗ್ರೂಫ್ ಗಳಲ್ಲಿ ಹರಿದಾಡುತ್ತಿದೆ.

ದಕ್ಷಿಣ ಸಂಚಾರಿ ಠಾಣೆಯ ಇನ್ಸಪೆಕ್ಟರ್ ಈಗಾಗಲೇ ಬೇರೆ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿಸಿಕೊಳ್ಳಲು ಶಿಫಾರಸ್ಸು ಪತ್ರಕ್ಕಾಗಿ ಅಲೆದಾಟ ಮಾಡುತ್ತಿರುವ ಸಮಯದಲ್ಲೇ ಇಂತಹದೊಂದು ಮಾಹಿತಿ ಬೇಕಿರುವುದು ಏತಕ್ಕೆ ಎಂಬ ಪ್ರಶ್ನೆ ಮೂಡಿದೆ.

ಹುಬ್ಬಳ್ಳಿ-ಧಾರವಾಡದ ಇತಿಹಾಸದಲ್ಲೇ ಇಂತಹದೊಂದು ಮಾಹಿತಿಯನ್ನ ಓರ್ವ ಪೊಲೀಸ್ ಇನ್ಸಪೆಕ್ಟರ್ ಕೇಳಿರುವುದು ಮೊದಲಾಗಿದೆ. ಸಿಬ್ಬಂದಿಗಳು ಇದನ್ನೇಲ್ಲಾ ಕೊಡ್ತಾರಾ ಎಂಬುದಷ್ಟೇ ಈಗ ಉಳಿದಿರುವ ಕುತೂಹಲ.


Spread the love

Leave a Reply

Your email address will not be published. Required fields are marked *