ಇನ್ಸಪೆಕ್ಟರ್, WHC ಅಮಾನತ್ತಿನ ನಂತರ ಡಿಸಿಪಿ ಸಸ್ಪೆಂಡ್: ಎಸಿಪಿ ವಿಜಯಕುಮಾರ ತಳವಾರ ಬಚಾವ್…!!!
1 min readಹುಬ್ಬಳ್ಳಿ: ಅಂಜಲಿ ಅಂಬಿಗೇರಳ ಹತ್ಯೆಯ ಮುನ್ನ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆಂದು ಪೊಲೀಸ್ ಇನ್ಸಪೆಕ್ಟರ್, ಮಹಿಳಾ ಹೆಡ್‌ಕಾನ್ಸಟೇಬಲ್ ಅಮಾನತ್ತು ಮಾಡಲಾಗಿತ್ತು. ಇಂದು ಡಿಸಿಪಿ ಅವರನ್ನ ಅಮಾನತ್ತು ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಗೆ ಅಂಜಲಿ ಕುಟುಂಬದವರು ಹೋಗಿ ಹೇಳಿದ ನಂತರವೂ ಪೊಲೀಸರು ಕ್ರಮ ಜರುಗಿಸಿಲ್ಲವೆಂದು ಆರೋಪ ಕೇಳಿ ಬಂದ ತಕ್ಷಣವೇ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಅವರು ಇನ್ಸಪೆಕ್ಟರ್ ಚಂದ್ರಶೇಖರ ಚಿಕ್ಕೋಡಿ ಹಾಗೂ ರೇಖಾ ಹಾವರಡ್ಡಿ ಅವರನ್ನ ಅಮಾನತ್ತು ಮಾಡಿದ್ದರು.
ಇದೀಗ ರಾಜ್ಯ ಸರಕಾರ ಡಿಸಿಪಿ ರಾಜೀವ ಅವರನ್ನ ಅಮಾನತ್ತು ಮಾಡಿ ಆದೇಶ ಹೊರಡಿಸಿದೆ. ಸೋಜಿಗವೆಂದರೇ ಎಸಿಪಿ ವಿಜಯಕುಮಾರ ತಳವಾರ ಅವರ ನಿರ್ಲಕ್ಷ್ಯವೂ ಇದೇ ಎಂದು ಹೇಳಲಾಗಿತ್ತು.
ಅವರ ವಿರುದ್ಧವೂ ರಾಜ್ಯ ಸರಕಾರ ಕ್ರಮಕೈಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.