ಹುಬ್ಬಳ್ಳಿಯಲ್ಲಿ ನಿನ್ನೆ ಪೊಲೀಸ್, ಇಂದು ಹವಾಲ್ದಾರ ಮನೆ ಕಳ್ಳತನ..!

ಹುಬ್ಬಳ್ಳಿ: ಜನರನ್ನ ರಕ್ಷಣೆ ಮಾಡಿ, ಅವರ ನೆಮ್ಮದಿಯನ್ನ ಕಾಯುತ್ತಿರುವ ಪೊಲೀಸರ ಮನೆಗಳನ್ನೂ ಕಳ್ಳರು ಟಾರ್ಗೆಟ್ ಮಾಡುತ್ತಿದ್ದು, ಪೊಲೀಸ್ ವಸತಿ ಗೃಹದಲ್ಲಿಯೇ ಕಳ್ಳತನ ಮುಂದುವರೆದಿದೆ.
ಹುಬ್ಬಳ್ಳಿಯ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ರಾಠೋಡ ಅವರ ಮನೆ ಕಳ್ಳತನವಾದ ಬೆನ್ನಲ್ಲೇ ಸಂಚಾರಿ ಠಾಣೆಯ ಹವಾಲ್ದಾರ ನಾಯ್ಕರ್ ಎಂಬುವವರ ಮನೆಯೂ ಕಳ್ಳತನವಾಗಿದೆ.
ಕರ್ತವ್ಯಕ್ಕೆ ಹೋದ ಸಮಯದಲ್ಲಿ ಕಳ್ಳತನ ನಡೆಯುತ್ತಿದ್ದು, ರಾಠೋಡ ಎನ್ನುವವರ ಮನೆಯಲ್ಲಿ ಚಿನ್ನಾಭರಣ ದೋಚಿಕೊಂಡು ಹೋಗಲಾಗಿದ್ದು, ಹವಾಲ್ದಾರ್ ನಾಯ್ಕರ ಮನೆಯಲ್ಲಿ ಏನೇನು ಕಳ್ಳತನವಾಗಿದೆ ಎಂಬ ಮಾಹಿತಿ ಇನ್ನೂ ಸಿಗಬೇಕಿದೆ.
ಕೊರೋನಾ ಸಮಯದಿಂದಲೂ ಮನೆಯಲ್ಲಿ ಇರುವುದು ಕಡಿಮೆಯಾದ ಹಿನ್ನೆಲೆಯಲ್ಲಿ, ರಾತ್ರಿ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು, ಕೈಗೆ ಸಿಕ್ಕಿದ್ದನ್ನ ದೋಚಿಕೊಂಡು ಪರಾರಿಯಾಗಿದ್ದಾರೆ.
ಘಟನೆಯ ಬಗ್ಗೆ ಉಪನಗರ ಠಾಣೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ.