Posts Slider

Karnataka Voice

Latest Kannada News

ದಂಪತಿ ಉಸಿರುಗಟ್ಟಿಸಿ ಕೊಲೆಗೈದ ಶಂಕಿತನಿಗೆ ಗುಂಡೇಟು: ಹಲ್ಲೆಗೊಳಗಾದ ಪೊಲೀಸರು

1 min read
Spread the love

ಬೇಲೂರು: 29 ರಂದು ವೃದ್ಧ ದಂಪತಿಯನ್ನು ಉಸಿರುಗಟ್ಟಿಸಿ ಕೊಲೆಗೈದ ಶಂಕಿತ ಆರೋಪಿಯ ಮೇಲೆ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ಚನ್ನರಾಯಪಟ್ಟಣದಲ್ಲಿ ನಡೆದಿದ್ದು.  ಬಂಧಿಸುವ ವೇಳೆ ಆರೋಪಿಯಿಂದ ಪೊಲೀಸ್ ರ ಮೇಲೆ ಹಲ್ಲೆಗೆ ಯತ್ನಿಸಿದ ವೇಳೆ  ಬೇಲೂರು ಸಿಪಿಐ ಸಿದ್ದರಾಮೇಶ್ವರ್ ಪೈರಿಂಗ್ ನಡೆಸಿದ್ದಾರೆ.

ಕೊಲೆ ಆರೋಪಿಯನ್ನು ಶರಣಾಗುವಂತೆ ಮನವಿ ಮಾಡಿದರೂ ಜಗ್ಗದ ಕಾರಣ ಪೊಲೀಸರು ಫೈರಿಂಗ್ ನಡೆಸಿದ ಘಟನೆ ಚನ್ನರಾಯಪಟ್ಟಣ ತಾಲೂಕು ಜೋಡಿಗಟ್ಟೆ ಬಳಿ ನಡೆದಿದೆ. ಮಂಗಳವಾರ ಮುಂಜಾನೆ ಕೋಳಿ ಫಾರಂ ನಲ್ಲಿ ಅಡಗಿ ಕುಳಿತಿದ್ದ ಆರೋಪಿ ಬಂಧಿಸುವ ವೇಳೆ ಈ ಘಟನೆ ನಡೆದಿದೆ.

ಪ್ರಸಾದ್ ಅಲಿಯಾಸ್ ಗುಂಡ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಲು ತೆರಳಿದ್ದರು. ಈ ವೇಳೆ ಶರಣಾಗುವಂತೆ ಮನವಿ ಮಾಡಿದರೂ ಬಗ್ಗದ ಆರೋಪಿ ಪ್ರಸಾದ್. ಬಂಧಿಸಲು ಮುಂದಾದ ಜಿಲ್ಲಾ ಡಿಸಿಐಬಿ ಇನ್ಸ್ ಪೆಕ್ಟರ್ ವಿನಯ್ ಅವರ ಮೇಲೆ ಚಾಕುವಿನಿಂದ ಹಲ್ಲೆಗೆ ಯತ್ನಿಸಿದ್ದಾನೆ.

ಪರಿಣಾಮವಾಗಿ ಇನ್ಸ್ ಪೆಕ್ಟರ್ ಎಡಗೈಗೆ ಗಾಯವಾಗಿದ್ದು, ರಕ್ಷಣೆಗಾಗಿ ವಿನಯ್ ಜೊತೆ ಇದ್ದ ಬೇಲೂರು ಇನ್ಸ್ ಪೆಕ್ಟರ್ ಸಿದ್ದರಾಮೇಶ್ವರ್ ಅವರು ಫೈರಿಂಗ್ ನಡೆಸಿದ್ದಾರೆ. ಆರೋಪಿ ಪ್ರಸಾದ್ ಮಂಡಿ ಭಾಗಕ್ಕೆ ಗುಂಡೇಟು ಬಿದ್ದಿದ್ದು, ಈತನನ್ನು ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದ್ದು,   ಇನ್ಸ್ ಪೆಕ್ಟರ್ ವಿನಯ್ ಅವರು ಕೂಡ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹಣಕ್ಕಾಗಿ ವೃದ್ಧ ದಂಪತಿಗಳನ್ನ ಕೊಲೆ ಮಾಡಿದ್ದ ಆರೋಪದ ಮೇಲೆ ಪ್ರಸಾದನನ್ನು ಪೊಲೀಸರು ಬಂಧಿಸಲು ತೆರಳಿದ್ದರು. ಆಲಗೊಂಡನಹಳ್ಳಿ ಜೋಡಿ ಕೊಲೆ ಆರೋಪದ ಮೇಲೆ ಇನ್ನೂ ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಲಾಕ್ ಡೌನ್ ಹಿನ್ನಲೆ ಬೆಂಗಳೂರಿನಿಂದ ಸ್ವ ಗ್ರಾಮಕ್ಕೆ ಒಂದು ತಿಂಗಳ ಹಿಂದೆ ಈ ಆರೋಪಿಗಳು ಬಂದಿದ್ದರು ಎನ್ನಲಾಗಿದೆ.


Spread the love

Leave a Reply

Your email address will not be published. Required fields are marked *

You may have missed