Posts Slider

Karnataka Voice

Latest Kannada News

ಹುಬ್ಬಳ್ಳಿ: ಸಾವಿಗೀಡಾದ ಪೊಲೀಸ್, 24ಕ್ಕೆ ಅಕ್ಕನ ಮಗಳ ಜೊತೆ ಮದುವೆಯಾಗುವವನಿದ್ದ…

1 min read
Spread the love

ಹುಬ್ಬಳ್ಳಿ: ತಾನಾಯಿತು ತನ್ನ ಕೆಲಸವಾಯಿತು ಎಂದುಕೊಂಡು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಪೊಲೀಸ್ ನೋರ್ವ ಮಂಗಳವಾರ ರಾತ್ರಿ ನಡೆದ ಅಪಘಾತದಲ್ಲಿ ಸಾವಿಗೀಡಾಗಿದ್ದು, ಇದೇ ತಿಂಗಳ 24ರಂದು ಅಕ್ಕನ ಮಗಳ ಜೊತೆ ಮದುವೆ ಫಿಕ್ಸ್ ಆಗಿತ್ತಂತೆ. ವಿಧಿ ಇಂತಹ ಆಟವಾಡಿದೆ.

ಸಂಗಮೇಶ್ವರ ಗ್ರಾಮದಲ್ಲಿ ಅಂತಿಮ ಗೌರವ ಸಲ್ಲಿಸಿದ ಪೊಲೀಸರು

ಪಂಡಿತ ಕಾಸರ್ ಎಂಬ ಪೇದೆ ಮೂಲತಃ ಕಲಘಟಗಿ ತಾಲೂಕಿನ ಸಂಗಮೇಶ್ವರ ಗ್ರಾಮದವ. ಓರ್ವ ಅಣ್ಣ ಸೇರಿದಂತೆ ಮೂವರು ಅಕ್ಕ-ತಂಗಿಯರನ್ನ ಹೊಂದಿದ್ದರು. ಇತ್ತೀಚೆಗೆ ಗ್ರಾಮದಲ್ಲಿ ಹೊಸದೊಂದು ಮನೆಯನ್ನೂ ಕಟ್ಟಿಕೊಂಡಿದ್ದರು. ಆ ಮನೆಯ ಗೃಹ ಪ್ರವೇಶವೂ ಇದೇ ತಿಂಗಳ 21ರಂದು ಮಾಡಲು ನಿರ್ಧರಿಸಲಾಗಿತ್ತು.

ಪಂಡಿತ ಕಾಸರ್ ಗ್ರಾಮದಲ್ಲಿ ನಯ- ವಿನಯದಿಂದ ನಡೆದುಕೊಳ್ಳುತ್ತಿದ್ದರು. ಯಾವುದೇ ಸಮಯದಲ್ಲಿಯೂ ತಾನು ಪೊಲೀಸ್ ಎನ್ನುವ ಮನೋಭಾವನೆಯನ್ನ ಹೊಂದಿರಲಿಲ್ಲ. 2017ರಲ್ಲಿ ನೌಕರಿಗೆ ಸೇರಿದ ನಂತರ, ಹೊಸ ಬದುಕಿಗಾಗಿ ಹಂಬಲಿಸುತ್ತಿದ್ದ.

ಇಂದು ಪಂಡಿತ ಕಾಸರ್ ಅವರ ಮೃತದೇಹ ಗ್ರಾಮಕ್ಕೆ ಬಂದಾಗ, ಇಡೀ ಊರಿಗೆ ಊರು ಮಮ್ಮುಲ ಮರುಗುತ್ತಿತ್ತು. ಪೊಲೀಸರು ಅಂತಿಮ ಗೌರವ ಸಲ್ಲಿಸುವ ಸಮಯದಲ್ಲಿ ಎಲ್ಲರ ಕಣ್ಣಲ್ಲೂ ನೀರು.

ತನ್ನ ತಮ್ಮನ ಬದುಕು ಹಸನಾಗಲಿ ಎಂದುಕೊಂಡು ಮಗಳನ್ನ ಕೊಡಲು ಮುಂದಾಗಿದ್ದ ಅಕ್ಕ, ಮೃತದೇಹದ ಮುಂದೆ ಕಣ್ಣೀರಾಗುತ್ತಿದ್ದರು.


Spread the love

Leave a Reply

Your email address will not be published. Required fields are marked *

You may have missed