ವಿದ್ಯಾಗಿರಿ ಠಾಣೆಯ ಪೊಲೀಸ್ ನಿಂಗಪ್ಪನ ಸಾವಿಗೆ ಯಾರೂ ಹೊಣೆ- ಗರ್ಭೀಣಿ ಹೆಂಡತಿಯನ್ನ ನೋಡಿಕೊಳ್ಳುವವರು ಇಲ್ಲಾ…!
1 min readಧಾರವಾಡ: ಪೊಲೀಸ್.. ಹಾಗಾಂದ್ರೇ ಸಾಕು, ಬಹುತೇಕರು ಅವರಿಗೇನು ಕಮ್ಮಿ ಎನ್ನುತ್ತಲೇ ಕೊಂಕು ನುಡಿಗಳನ್ನ ಆಡುತ್ತಾರೆ. ಆದರೆ, ಅವರಿಗಿರುವ ವರ್ಕ್ ಲೋಡ್ ಯಾರಿಗೂ ಗೊತ್ತೆ ಆಗಲ್ಲ. ಯಾರೋ ಸತ್ತರೇ, ನೂರೆಂಟು ಪ್ರಶ್ನೆ ಮಾಡುವವರಿಗೆ ಪೊಲೀಸ್ ತೀರಿಕೊಂಡಾಗ, ಆತ ಎಂತಹ ಸ್ಥಿತಿಯಲ್ಲಿದ್ದ ಎಂಬುದನ್ನ ಯಾರೂ ತಿಳಿಯೋದೆ ಇಲ್ಲಾ. ಅದನ್ನ ಸರಿದೂಗಿಸುವ ಪ್ರಯತ್ನವನ್ನ ಕರ್ನಾಟಕವಾಯ್ಸ್.ಕಾಂ ಮಾಡುತ್ತಿದೆ. ಆಗ, ಪೊಲೀಸ್ ನಿಂಗಪ್ಪನ ಸಾವಿಗೆ ಕಾರಣವೇನು ಎಂಬುದನ್ನ ನೀವೂ ಕಂಡು ಹಿಡಿಯುವರಂತೆ..
ಹೌದು.. ನಿಂಗಪ್ಪ ಭೂಸಣ್ಣನವರ ಶುಕ್ರವಾರ ಹಾಡುಹಗಲೇ ಶ್ರೀ ವೆಂಕಟೇಶ್ವರ ಬೋರವೆಲ್ ವಾಹನಕ್ಕೆ ಸಿಕ್ಕು ಸಾವಿಗೀಡಾಗಿದ್ದು, ಪೊಲೀಸ್ ಠಾಣೆಯ ಬಹುತೇಕರು ಅತ್ತು ಕಣ್ಣೀರಾಗಿದ್ದಾರೆ. ಆದರೆ, ಇಂತಹ ದುಃಸ್ಥಿತಿಗೆ ಕಾರಣವಾಗಿದ್ದು ಏನು ಎಂಬುದನ್ನ ಅರಿತುಕೊಳ್ಳಬೇಕಿದೆ.
ಪ್ರತಿ ಕ್ಷಣದಲ್ಲೂ ಇದ್ದ ಕಮೀಷನರ್..
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಘಟನೆ ನಡೆಯುತ್ತಿದ್ದ ಹಾಗೇ ಸ್ಥಳಕ್ಕೆ ಬಂದು ಎಲ್ಲವಕ್ಕೂ ಸೂಚನೆ ಕೊಟ್ಟರು. ಒಬ್ಬಂಟಿಯಾದ ಗರ್ಭೀಣಿ ಮಹಿಳೆಗೆ ಇಬ್ಬರು ಮಹಿಳಾ ಪೇದೆಗಳನ್ನ ನೇಮಕ ಮಾಡಿದ್ರು. ಮನೆಯ ಹಿರಿಯನಂತೆ ಎಲ್ಲವನ್ನೂ ತೀರ್ಮಾನ ತೆಗೆದುಕೊಂಡಿದ್ದರು.
ನವಲೂರು ಛಾವಣಿ ನಿವಾಸಿಯಾಗಿದ್ದ ವಿದ್ಯಾಗಿರಿ ಠಾಣೆಯ ನಿಂಗಪ್ಪ ಅವರು ಕೆಲವು ದಿನಗಳಿಂದ ‘ಎಸ್ ಬಿ’ ಡ್ಯೂಟಿಗೆ ನಿಯೋಜನೆಗೊಂಡಿದ್ದರು. ಅದೇ ಕಾರಣಕ್ಕೆ ಚುನಾವಣೆ ವೇಳೆಯಲ್ಲಿ ಬೇರೆ ಕಡೆಯಿಂದ ಬಂದ ಪೊಲೀಸರಿಗೆ ಊಟದ ವ್ಯವಸ್ಥೆಯನ್ನ ಮಾಡಬೇಕಾಗತ್ತೆ. ಅದನ್ನ ಮಾಡುವಾಗಲೇ ನಿಂಗಪ್ಪ ಇನ್ನಿಲ್ಲವಾಗಿದ್ದಾರೆ.
ಚುನಾವಣೆ ಸಮಯದಲ್ಲಿ ಜನರಿಗೆ ಚುನಾವಣೆ, ಕ್ಯಾಂಡಿಟೇಟ್ ಮತ್ತಿತರ ವಿಷಯಗಳೇ ಕಂಡು ಬರುತ್ತವೆ. ಅದೇ ಸಮಯದಲ್ಲಿ ದೂರದೂರಿಂದ ಬಂದಿರುವ ಪೊಲೀಸರಿಗೆ ಊಟದ ವ್ಯವಸ್ಥೆ, ವಸತಿ ವ್ಯವಸ್ಥೆಯನ್ನ ಹೇಗೆ ಮಾಡುತ್ತಾರೆಂಬುದು ಗೊತ್ತೆಯಿರಲ್ಲ. ಆ ಸಮಯದಲ್ಲಿ ವರ್ಕ್ ಲೋಡ್ ಹೆಚ್ಚಾಗತ್ತೆ. ಹೋಗುವಾಗಲೂ ಪೋನ್ ದಲ್ಲಿಯೇ ಮಾತನಾಡುತ್ತ ಹೋಗಬೇಕಾಗತ್ತೆ, ಹಾಗೇ ಆಗುವ ಸಮಯದಲ್ಲಿಯೇ ನಿಂಗಪ್ಪನಂತಹ ಸಾವುಗಳು ಸಂಭವಿಸುತ್ತವೆ.
ಠಾಣೆಯ ಹೊರಗಡೆಯ ವಿಷಯಗಳಿಗೆ ಅತಿಯಾದ ತಲೆ ಕೆಡಿಸಿಕೊಂಡು ತಿರುಗುವುದು ಹೆಚ್ಚೆಚ್ಚು ಪೊಲೀಸರೇ ಹೊರತು, ಎಲ್ಲ ಅಧಿಕಾರಿಗಳಲ್ಲ. ಕೆಲವು ಬೆರಳೆಣಿಕೆ ಅಧಿಕಾರಿಗಳು ಮಾತ್ರ, ಪೊಲೀಸ್ ರಂತೆ ಹಗಲಿರುಳು ಕಾರ್ಯನಿರ್ವಹಿಸುತ್ತಾರೆ.
ಪೊಲೀಸ್ ನಿಂಗಪ್ಪ ಅವರ ಸಾವಿಗೆ ಆ ಕ್ಷಣದ ವರ್ಕ ಲೋಡ್ ಕಾರಣವಾಯಿತೇ ಎಂಬ ಪ್ರಶ್ನೆ ಕಾಡಲಾರಂಭಿಸಿದೆ. ಇದೇಲ್ಲ ಮುಗಿದು ಹೊರಳಿ ನೋಡಿದ್ರೇ, ಮನೆಯಲ್ಲಿ ಒಂದೂವರೆ ವರ್ಷದ ಮಗು ಮತ್ತೂ ತುಂಬು ಗರ್ಭೀಣಿ. ಅವಳನ್ನ ನೋಡಿಕೊಳ್ಳುವವರು ಇಲ್ಲಾ.. ವಿಧಿ ಹೀಗೂ ಮಾಡಿಬಿಡತ್ತೆ.. ಪೊಲೀಸರು ಮನುಷ್ಯರೇ..