2018ರ ಬ್ಯಾಚಿನ ಮತ್ತೋರ್ವ ಪೊಲೀಸ್ ಸಾವು….
1 min readತಡರಾತ್ರಿ ಹುಬ್ಬಳ್ಳಿಯಲ್ಲಿ ನೇಣಿಗೆ ಶರಣಾಗಿದ್ದ 2018 ರ ಬ್ಯಾಚಿನ ಮಲ್ಲಿಕಾರ್ಜುನ
ಅದೇ ಬ್ಯಾಚಿನ ಪವನಕುಮಾರ ಪೇದೆ ಬಲಿ
ಚಿತ್ರದುರ್ಗ: ವಾಣಿಜ್ಯನಗರಿಯಲ್ಲಿ 2018 ರ ಬ್ಯಾಚಿನ ಪೊಲೀಸ್‌ನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದ ಸಮಯದಲ್ಲೇ ಅದೇ 2018 ರ ಬ್ಯಾಚಿನ ಪೊಲೀಸ್‌ನೋರ್ವ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾರೆ.
ಪೊಲೀಸ್ ಪೇದೆ ಪವನಕುಮಾರ (30) ಮೃತ ದುರ್ದೈವಿಯಾಗಿದ್ದು, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾ. ದೊಡ್ಡ ಉಳ್ಳಾರ್ತಿ ನಿವಾಸಿಯಾಗಿದ್ದರು.
ಕೆಲವು ದಿನಗಳಿಂದ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಪೇದೆ ಪವನ್‌ರನ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪವನ್ ಅವರು, 2018 ಬ್ಯಾಚ್ ನಲ್ಲಿ ನೇಮಕಗೊಂಡಿದ್ದರು.
ಮೃತ ಪೇದೆ ಪವನ್ ಕುಮಾರ್ ಪತ್ನಿ ಕೂಡಾ ಪೊಲೀಸ್ ಪೇದೆ ಆಗಿದ್ದು, ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಪವನ್ ಮೃತ ದೇಹ ಅಂತ್ಯಕ್ರಿಯೆ ನಡೆದಿದೆ.