ಹುಬ್ಬಳ್ಳಿ ಧಾರವಾಡದಲ್ಲಿ ಒಂದು ವರ್ಷಕ್ಕೆ ಸಿಕ್ಕಿದ್ದು 2ಕ್ವಿಂಟಾಲ್, 34ಕೆಜಿ, 750 ಗ್ರಾಂ ಗಾಂಜಾ, ಮಾದಕ ವಸ್ತು…!
1 min readಹುಬ್ಬಳ್ಳಿ: ನ್ಯಾಯಾಲಯದ ಆದೇಶದ ಮೇರೆಗೆ 2020-21ರಲ್ಲಿ ರೇಡ್ ಮಾಡಿದ ಪ್ರಕರಣದಲ್ಲಿ ಸಿಲುಕಿದ್ದ ಗಾಂಜಾ ಹಾಗೂ ಮಾದಕ ವಸ್ತುಗಳನ್ನ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಇಂದು ತಾರಿಹಾಳದ ಹೊರವಲಯದಲ್ಲಿ ನಾಶಪಡಿಸಿತು.
ಹುಬ್ಬಳ್ಳಿ-ಧಾರವಾಡ ಕಮೀಷನರೇಟಿನ್ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ 2ಕ್ವಿಂಟಾಲ್ 34 ಕೆಜಿ 750 ಗ್ರಾಂ ಗಾಂಜಾ ಮತ್ತು ಮಾದಕ ವಸ್ತುಗಳನ್ನ ದಾಳಿ ಮಾಡಿ, ವಶಕ್ಕೆ ಪಡೆಯಲಾಗಿತ್ತು.
ಅಂತರಾಷ್ಟ್ರೀಯ ಮಾದಕ ವಸ್ತುಗಳ ರಹಿತ ದಿನಾಚರಣೆಯ ಅಂಗವಾಗಿ ಡಿಸಿಪಿ ಕೆ.ರಾಮರಾಜನ್ ಹಾಗೂ ಡಿಸಿಪಿ ಆರ್.ಬಿ.ಬಸರಗಿ ಸಮ್ಮುಖದಲ್ಲಿ ನಾಶಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಕಮೀಷನರೇಟಿನ ಇನ್ನುಳಿದ ಅಧಿಕಾರಿಗಳು ಉಪಸ್ಥಿತರಿದ್ದರು.