ಕರ್ತವ್ಯಲೋಪ- ಐವರು ಪೊಲೀಸರ ಅಮಾನತ್ತು…!

ವಿಜಯಪುರ: ಕರ್ತವ್ಯಲೋಪ ಮಾಡಿದ್ದಲ್ಲದೇ ಕರ್ತವ್ಯದಲ್ಲಿ ಬೇಜವಾಬ್ದಾರಿತನ ತೋರಿಸಿದ ಐವರು ಪೊಲೀಸರನ್ನ ಅಮಾನತ್ತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ ಆದೇಶ ಹೊರಡಿಸಿದ್ದಾರೆ.

ಕರ್ತವ್ಯ ಲೋಪ ಹಾಗೂ ಬೇಜವಾಬ್ದಾರಿ ಹಿನ್ನಲೆ ನಿಡಗುಂದಿ ಹಾಗೂ ಬಸವನಬಾಗೇಬಾಡಿ ಪೊಲೀಸ ಠಾಣೆಯ ಐವರನ್ನು ಅಮಾನತು ಮಾಡಿ ಆದೇಶ ಮಾಡಿದ್ದಾರೆ. ನಿಡಗುಂದಿ ಪೊಲೀಸ ಠಾಣೆಯ ಎಸ್.ಸಿ. ರೆಡ್ಡಿ, ಐ.ಜಿ. ಹೊಸಗೌಡರ ಅಮಾನತ್ತಾಗಿದ್ದಾರೆ.
ಬಸವನಬಾಗೇಬಾಡಿ ಪೊಲೀಸ ಠಾಣೆಯ ಐ.ಎಂ. ಮಕಾಂದಾರ, ಆರ್.ಎಲ್. ರಾಠೋಡ, ಹಾಗೂ ಎಂ.ಎಂ. ಯಾಳಗಿ ಅಮಾನತ್ತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಇಲಾಖೆಯ ಪ್ರತಿಯೊಬ್ಬರ ಬಗ್ಗೆಯೂ ಮಾಹಿತಿಯನ್ನ ಪಡೆಯುತ್ತಿರುವ ಎಸ್ಪಿಯವರು, ಯಾವುದೇ ಥರದ ಮುಲಾಜಿಗೆ ಬೀಳದೇ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ತಮ್ಮ ಇಲಾಖೆಯವರನ್ನ ಮೊದಲು ಎಚ್ಚರಗೊಳಿಸುತ್ತಿದ್ದಾರೆ.