ಕಮೀಷನರ್ ಲಾಬುರಾಮ್ ಅವರೇ ‘ಎಲ್ಲಿಗೆ ಬಂತು ಗಾಂಜಾ ಕೇಸ್’- ದೀಪದ ಕೆಳಗೆ ಕತ್ತಲು ನಿರಂತರನಾ….!?
1 min readಹುಬ್ಬಳ್ಳಿ: ಅವಳಿನಗರದ ಪೊಲೀಸರು ತಲೆತೆಗ್ಗಿಸುವಂತಹ ಕೆಲಸ ಮಾಡಿದ್ದ ಪೊಲೀಸರನ್ನ ಅಮಾನತ್ತು ಮಾಡಿ, ಕೈತೊಳೆದುಕೊಂಡು ಬಿಟ್ಟರೇ, ಕಳೆದು ಹೋದ ಗಾಂಜಾ ಎಲ್ಲಿದೆ ಎಂದು ಪತ್ತೆ ಹಚ್ಚಲು ಆಗದೇ ಇರುವುದು ಸೋಜಿಗ ಮೂಡಿಸುತ್ತಿದೆ.
ಅವಳಿನಗರದಲ್ಲಿ ಪೊಲೀಸರ ಬಗ್ಗೆಯಿದ್ದ ನಂಬಿಕೆಯನ್ನ ಹೆಚ್ಚಿಗೆ ಮಾಡಿದ್ದ ಕೀರ್ತಿ ಪೊಲೀಸ್ ಕಮೀಷನರ್ ಲಾಬುರಾಮ್ ಅವರಿಗಿದ್ದರೂ, ಈ ಕೇಸ್ ಲ್ಲಿ ಇನ್ನೂ ತೀರ್ಮಾನಕ್ಕೆ ಬರದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಅಮಾನತ್ತಾಗಿರುವ ಇನ್ಸಪೆಕ್ಟರ್ ವಿಶ್ವನಾಥ ಚೌಗಲೆಯವರು ಈಗಾಗಲೇ ಅಲ್ಲಿಲ್ಲಿ ಅಲೆದಾಡಿ, ತಮಗೆ ಪೋಸ್ಟಿಂಗ್ ಕೇಳಲು ಆರಂಭಿಸಿದ್ದಾರೆ. ಪ್ರಕರಣ ಇಂತಹ ಸ್ಥಿತಿಯಲ್ಲಿದ್ದಾಗ, ಹೀಗೆ ಮಾಡಲು ಅವಕಾಶ ನೀಡಿದಂತಾಗಿದೆ.
ಅಮಾನತ್ತಾದ ಕೆಲವು ಸಿಬ್ಬಂದಿಗಳು ಇನ್ನೂ ತಮ್ಮ ಧೋ ನಂಬರ ದಂಧೆಯನ್ನ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಅಷ್ಟೇ ಅಲ್ಲ, ತಮಗೆ ಅನ್ನ ಕೊಡುವ ಠಾಣೆಗಳ ಮರ್ಯಾದೆಯನ್ನ ಬೀದಿಗೆ ತರುವ ಷಢ್ಯಂತ್ರವನ್ನ ಆಗಾಗ ಮಾಡುತ್ತಲೇ ಇದ್ದಾರೆ.
ಕಳೆದು ಹೋದ ಗಾಂಜಾವನ್ನ ಹಿಡಿದು ಮಾರಿದ ಮಹಾನುಭಾವರನ್ನ ಜೈಲಿಗೆ ಕಳಿಸುವ ಜವಾಬ್ದಾರಿ ಪೊಲೀಸ್ ಕಮೀಷನರ್ ಮೇಲಿದೆ ಎಂದು ಪ್ರಜ್ಞಾವಂತರು ಅಂದುಕೊಂಡಿದ್ದಾರೆ. ಆ ಭರವಸೆಯನ್ನ ಕಮೀಷನರ್ ಲಾಬುರಾಮ್ ಅವರು ಉಳಿಸಿಕೊಳ್ಳಬೇಕಿದೆ.