“ಕಮೀಷನರ್ ರೇಣುಕಾ ಸುಕುಮಾರ” ಎತ್ತಂಗಡಿಗೆ “ಕೆಲ” ಕೈಗಳ ಹುನ್ನಾರ…!!!
1 min readಧಾರವಾಡ: ಅವಳಿನಗರ ಪೊಲೀಸ್ ಕಮೀಷನರೇಟ್‌ನ ಕಮೀಷನರ್ ಅವರನ್ನ ವರ್ಗಾವಣೆ ಮಾಡಲು ಕೆಲವರು ನಿರಂತರ ಪ್ರಯತ್ನ ಮಾಡುತ್ತಿದ್ದು, ಇದಕ್ಕೆ ವ್ಯತಿರಿಕ್ತವಾಗಿ ಹೋರಾಟಗಳು ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದಿದೆ.
ನೇಹಾ ಹಿರೇಮಠ ಹತ್ಯೆ ನಡೆದ ಕೆಲವೇ ನಿಮಿಷಗಳ ಅವಧಿಯಲ್ಲಿ ಮಗಳ ಕಳೆದುಕೊಂಡಿದ್ದ ನಿರಂಜನ ಹಿರೇಮಠ ತಮ್ಮ ಅಪಾರವಾದ ನೋವಿನ ಸಮಯದಲ್ಲಿಯೂ ಪೊಲೀಸ್ ಕಮೀಷನರ್ ಅವರನ್ನ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದ್ದರು.
ಹೋರಾಟದ ವೀಡಿಯೋ…
ಈಗ ಮತ್ತೆ ಅಂಜಲಿ ಅಂಬಿಗೇರ ಕೊಲೆಯಾದಾಗ ಮಾತಾಡಿದ್ದಾರೆ. ಅಸಲಿಗೆ ಕಮೀಷನರ್ ಹತ್ಯೆ ನಡೆದ ಸಮಯದಲ್ಲಿ ಅನಾರೋಗ್ಯದ ಕಾರಣದಿಂದ ರಜೆಯಲ್ಲಿದ್ದರು. ತಮ್ಮ ಅನಾರೋಗ್ಯ ಮರೆತು ಡ್ಯೂಟಿಗೆ ಸೇರಿಕೊಂಡಿದ್ದರು. ಅಷ್ಟರಲ್ಲಿ ರಜತ ಉಳ್ಳಾಗಡ್ಡಿಮಠ ಅವರು ಹಿರಿಯ ಅಧಿಕಾರಿಗಳನ್ನ ವರ್ಗಾಯಿಸುವಂತೆಯೂ ಅಸಮರ್ಥರನ್ನ ಬದಲಿಸುವಂತೆಯೂ ಪತ್ರ ಬರೆದರು.
ಇದೀಗ ಕಮೀಷನರ್ ರೇಣುಕಾ ಸುಕುಮಾರ ಅವರು ಕೆಳವರ್ಗದವರು ಎನ್ನುವ ಕಾರಣಕ್ಕೆ ಹೀಗೆ ಮಾಡಲಾಗ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಅದೇ ಕಾರಣಕ್ಕೆ ಹೋರಾಟಗಳು ಆರಂಭಗೊಂಡಿವೆ.