ಮಳೆಯಲ್ಲಿ ಜನರ ಬಳಿ ಹೋದ ಪೊಲೀಸ್ ಕಮೀಷನರ್ ರಮಣ ಗುಪ್ತಾ…!!!
1 min readಹುಬ್ಬಳ್ಳಿ: ಸಾರ್ವಜನಿಕರ ಬದುಕಿನಲ್ಲಿ ಮತ್ತಷ್ಟು ನೆಮ್ಮದಿ ಮೂಡಿಸಲು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಮುಂದಾಗಿದ್ದು, ಅದೇ ಕಾರಣಕ್ಕೆ ಜನರ ಸಹಯೋಗದಲ್ಲಿ ಸಿಸಿಟಿವಿಗಳನ್ನ ಅಳವಡಿಕೆ ಮಾಡಲಾಗುತ್ತಿದೆ.
ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಸುರೇಶ ಯಳ್ಳೂರ ಆಸಕ್ತಿಯಿಂದ ಹಲವೆಡೆ ಸಿಸಿಟಿವಿಗಳನ್ನ ಅಳವಡಿಕೆ ಮಾಡಲಾಗಿದೆ. ಬೀಟ್ ಸಂಖ್ಯೆ 52ರ ಹೆಡ್‌ಕಾನ್ಸಟೇಬಲ್ ಮೆಹಬೂಬ ನದಾಫ ಮತ್ತಷ್ಟು ಆಸಕ್ತಿ ವಹಿಸಿ, ತಮ್ಮ ಲಿಮಿಟ್ಸ್‌ನಲ್ಲಿ ಸಿಸಿಟಿವಿಗಳನ್ನ ಅಳವಡಿಕೆ ಮಾಡಿದ್ದು, ಅದರ ಉದ್ಘಾಟನೆಯನ್ನ ಸ್ವತಃ ಪೊಲೀಸ್ ಕಮೀಷನರ್ ರಮಣ ಗುಪ್ತಾ ಅವರು ನೆರವೇರಿಸಿದರು.
ಇಂತಹ ಕೆಲಸ ಮಾಡಿದ ತಮ್ಮ ಸಿಬ್ಬಂದಿ ಮೆಹಬೂಬ ನದಾಫ ಅವರ ಕಾರ್ಯಕ್ಷಮತೆಗೆ ಕಮೀಷನರ್ ಅವರು ಐದು ಸಾವಿರ ರೂಪಾಯಿ ನಗದು ಬಹುಮಾನ ಘೋಷಣೆ ಮಾಡಿ, ವೇದಿಕೆಯಲ್ಲಿ ಸತ್ಕರಿದರು.
ಇನ್ಸಪೆಕ್ಟರ್ ಸುರೇಶ ಯಳ್ಳೂರ ಅವರು ಸಾರ್ವಜನಿಕ ವಲಯದಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದು, ಅವಳಿನಗರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಹೆಡ್‌ಕಾನ್ಸಟೇಬಲ್ ಮೆಹಬೂಬ ನದಾಫ ಮೊದಲಿಂದಲೂ ಜನಪರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರಿಗೆ ಸಾರ್ವಜನಿಕರು ಸಹಕಾರ ನೀಡುತ್ತಿದ್ದಾರೆ. ಇಂತಹ ಸಿಬ್ಬಂದಿಗಳಿಂದಲೇ ಪೊಲೀಸರ ಗೌರವ ಹೆಚ್ಚಾಗುತ್ತಿದೆ ಎಂಬುದನ್ನ ಅಲ್ಲಗಳೆಯುವಂತಿಲ್ಲ.
ಪೊಲೀಸ್ ಕಮೀಷನರ್ ರಮಣ ಗುಪ್ತಾ ಅವರು ಕೂಡಾ ಮಳೆಯನ್ನ ಲೆಕ್ಕಿಸದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಡಿಸಿಪಿ ಗೋಪಾಲ ಬ್ಯಾಕೋಡ ಉಪಸ್ಥಿತರಿದ್ದರು.