ಹುಬ್ಬಳ್ಳಿ ಇನ್ಸಪೆಕ್ಟರ್ ಜೆ.ಎಂ.ಕಾಲಿಮಿರ್ಚಿ ವಿನೂತನ ಪ್ರಯತ್ನ- “ಬೀಟ್ ಗೆ ಒಂದು ಪೊಲೀಸ್ ಮರ”….!

ಹುಬ್ಬಳ್ಳಿ: ಕೊರೋನಾ ಸಾಂಕ್ರಾಮಿಕ ರೋಗದಿಂದ ಹಲವರು ಹಲವು ರೀತಿಯಲ್ಲಿ ನೋವನ್ನ ಅನುಭವಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ, ಎರಡನೇಯ ಅಲೆಯ ಸಮಯದಲ್ಲಿ ಜನರು ಆಕ್ಸಿಜನ್ ಗಾಗಿ ಪಟ್ಟ ಶ್ರಮ, ಕಡಿಮೆಯೇನಲ್ಲ. ಅದೇ ಕಾರಣಕ್ಕೆ ಗೋಕುಲ ರಸ್ತೆ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಜೆ.ಎಂ.ಕಾಲಿಮಿರ್ಚಿ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಗೋಕುಲ ರಸ್ತೆ ಪೊಲೀಸ್ ಠಾಣೆಯ ಪ್ರತಿ ಬೀಟ್ ನಲ್ಲೂ ಪೊಲೀಸರು ಮರವನ್ನ ಬೆಳೆಸಲು ಮುಂದಾಗಿದ್ದಾರೆ. ಹಾಗಾಗಿಯೇ ಅದಕ್ಕೊಂದು ಚೆಂದನೆಯ “ಬೀಟ್ ಗೆ ಒಂದು ಪೊಲೀಸ್ ಮರ” ಎಂದು ನಾಮಕರಣ ಮಾಡಲಾಗಿದೆ.
ಸದಾಕಾಲ ಜನರ ಬಗ್ಗೆ ಚಿಂತನೆ ಮಾಡುವ ಪೊಲೀಸ್ ಇನ್ಸಪೆಕ್ಟರ್ ಜೆ.ಎಂ.ಕಾಲಿಮಿರ್ಚಿ, ಅವರ ಈ ನಿರ್ಧಾರ ಪೊಲೀಸರಲ್ಲೂ ಹುಮ್ಮಸ್ಸು ತುಂಬಿದೆ. ಅದೇ ಕಾರಣಕ್ಕೆ ಪ್ರತಿ ಬೀಟ್ ನಲ್ಲೂ ಮರಗಳನ್ನ ನೆಡುವ ಕಾರ್ಯಕ್ರಮ ನಡೆಸಲಾಗುತ್ತಿದೆ.
ಆಕ್ಸಿಜನ್ ಕೊರತೆಯನ್ನ ಹೋಗಲಾಡಿಸಲು ನಾವೇನೂ ಮಾಡಬೇಕು ಎಂಬುದನ್ನ ಸಲೀಸಾಗಿ ಹೇಳಿಕೊಟ್ಟ ಹಾಗೆಯೂ, ಕರ್ತವ್ಯ ನಿರ್ವಹಣೆ ಮಾಡಿದಾಗಿಯೂ ಮತ್ತೂ ಸಮಾಜದ ಸೇವೆ ಮಾಡಿದ ಹಾಗೆಯೂ ಈ ವಿನೂತನ ಕಾರ್ಯಕ್ರಮ ಯಶಸ್ವಿಯಾಗಿದೆ.