Posts Slider

Karnataka Voice

Latest Kannada News

Exclusive-ಗಾಂಜಾ ಮಾರಾಟ: ಪೊಲೀಸನೇ ಆರೋಪಿ- ಧಾರವಾಡ ಪೊಲೀಸರಿಗೆ ಕೊರೋನಾ ಸಂಕಟ

1 min read
Spread the love

ಧಾರವಾಡ: ರಾಜಧಾನಿಯಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿದ್ದರೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗಾಂಜಾ ಮಾರಾಟದ ಪ್ರಕರಣಗಳು ಪತ್ತೆಯಾಗುತ್ತಿವೆ. ಅಷ್ಟೇ ಅಲ್ಲ, ಗಾಂಜಾ ಮಾರಾಟದ ಕರಾಳ ಮುಖಗಳು ಒಂದೊಂದಾಗಿ ಬಯಲಾಗುತ್ತಿವೆ. ಅದಕ್ಕೆ ಸಾಕ್ಷಿಯಂಬಂತೆ ಧಾರವಾಡ  ಉಪನಗರ ಪೊಲೀಸರ ಕಾರ್ಯಾಚರಣೆಯಲ್ಲಿ ಪೊಲೀಸಪ್ಪನೇ ಸಿಕ್ಕಿಬಿದಿದ್ದು, ‘ಗಾಂಜಿಗರಲ್ಲಿ ಪೊಲೀಸರು’ಇರುವುದು ಖಚಿತವಾಗಿದೆ.

ಗಾಂಜಾ ಮಾರುತ್ತಿದ್ದ ಬೆಂಗಳೂರು ಮೂಲದ ಪೊಲೀಸನ ಬಂಧನವಾಗಿದ್ದು, ಆರೋಪಿಯನ್ನ ಸಂಜು ಪಾಟೀಲ್  ಎಂದು ಗುರುತಿಸಲಾಗಿದೆ.  ಮೂಲತಃ ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಕನದಾಳ  ಗ್ರಾಮದ ಸಂಜು ಪಾಟೀಲ್, ಧಾರವಾಡದ ಮುರಘಾಮಠದ ಹತ್ತಿರದಲ್ಲಿ ವಾಸಿಸುತ್ತಿದ್ದ.

ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿದ ಪೊಲೀಸರು ಬಂಧಿತನಿಂದ  283 ಗ್ರಾಂ ಗಾಂಜಾ ಹಾಗೂ 1 ಮೊಬೈಲ್ ಜಪ್ತಿ ಮಾಡಿದ್ದಾರೆ. ತದನಂತರ ಕೊರೋನಾ ಟೆಸ್ಟ್ ಮಾಡಿಸಲಾಗಿದ್ದು, ‘ಗಾಂಜಿಗ’ ಪೊಲೀಸ ಆರೋಪಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ ಎನ್ನಲಾಗಿದೆ.

ಇದೀಗ ಆರೋಪಿಯನ್ನ ಹಿಡಿದ ಉಪನಗರ ಪೊಲೀಸರು ಕೊರೋನಾ ಪಾಸಿಟಿವ್ ಆರೋಪಿಯಿಂದ ಸಂಕಟ ಎದುರಿಸುವಂತಾಗಿದೆ.

ಮತ್ತೊಂದು ಪ್ರಕರಣ.

ಧಾರವಾಡ ಉಪನಗರ ಪೊಲೀಸರ ಕಾರ್ಯಾಚರಣೆ ನಡೆಸಿದ್ದು, ಗಾಂಜಾ ಮಾರುತ್ತಿದ್ದ ಯುವಕರ ಗ್ಯಾಂಗನ್ನ ಬಂಧನ ಮಾಡಿದ್ದಾರೆ.

ಸಮೀವುಲ್ಲಾ ಹುಬ್ಬಳ್ಳಿ _(22) ಧಾರವಾಡದ ನಾರಾಯಣಪುರದ ನಿವಾಸಿ, ಜಡಸನ್ ಮಿರಜಕರ (25) ನಾರಾಯಣಪೂರ ನಿವಾಸಿ, ಮಂಜುನಾಥ ಜತ್ಲಿ  (23) ಗರಗ ಗ್ರಾಮದ ನಿವಾಸಿ, ಸಂಗಮೇಶ ಅಂಗಡಿ (23) ದಾನೇಶ್ವರ ನಗರದ ನಿವಾಸಿ ಯಾಗಿದ್ದು ಬಂಧಿತರಿಂದ 1 ಕೆಜಿ 75 ಗ್ರಾಂ ಗಾಂಜಾ 4 ಮೊಬೈಲ್‌ ಹಾಗೂ 2 ಬೈಕ ವಶಕ್ಕೆ ಪಡೆಯಲಾಗಿದೆ.


Spread the love

Leave a Reply

Your email address will not be published. Required fields are marked *