Posts Slider

Karnataka Voice

Latest Kannada News

ಹುಬ್ಬಳ್ಳಿಯಿಂದ ಹೊರಟಿದ್ದ “ಅಕ್ರಮ 85 ಲಕ್ಷ ರೂಪಾಯಿ”: ಚೇಸಿಂಗ್ ಮಾಡಿ ಹಿಡಿದ “ಗಂಡೆದೆ ಪೊಲೀಸರು”…

1 min read
Spread the love

ಹಾವೇರಿ: ಅಕ್ರಮವಾಗಿ ಹುಬ್ಬಳ್ಳಿಯಿಂದ 85 ಲಕ್ಷ ರೂಪಾಯಿ ಸಾಗಾಟ ಮಾಡುತ್ತಿದ್ದ ತಂಡವನ್ನ ಪೊಲೀಸರು ಸಿನಿಮೀಯ ರೀತಿಯಲ್ಲಿ ಹಿಡಿದಿರುವ ಘಟನೆ ಹಾನಗಲ್ ಬಳಿ ನಡೆದಿದೆ.

ಘಟನೆಯ ಎಕ್ಸಕ್ಲೂಸಿವ್ ವೀಡಿಯೋ ಇಲ್ಲಿದೆ ನೋಡಿ…

ಹಾವೇರಿ ಜಿಲ್ಲೆ ಹಾನಗಲ್ ಠಾಣೆ ಪೊಲೀಸರ ಕಾರ್ಯಾಚರಣೆ.

ದಾಖಲೆ ಇಲ್ಲದೆ ಅಕ್ರಮವಾಗಿ ಸಾಗಾಣಿಕೆ ಮಾಡ್ತಿದ್ದ ಎಂಬತ್ತೈದು ಲಕ್ಷ ರುಪಾಯಿ ಹಣ ಜಪ್ತಿ.

ಹುಬ್ಬಳ್ಳಿಯಿಂದ ಶಿವಮೊಗ್ಗ ಜಿಲ್ಲೆಯ ಸಾಗರದ ಕಡೆಗೆ ಸಾಗಾಣಿಕೆ ಮಾಡುತ್ತಿದ್ದ ಹಣ.

ಜೀವದ ಹಂಗು ಲೆಕ್ಕಿಸದೆ ಕಾರ ತಡೆದು ಹಣ ಜಪ್ತಿ. ಪೊಲೀಸರನ್ನು ಕಂಡು ಕಾರ ಸ್ಪೀಡ್ ಮಾಡಿದ್ದ ಆರೋಪಿಗಳು. ಕಾರ ಹಿಂದೆ ಓಡೋಡಿ ಹೋಗಿ ಕೆಳಕ್ಕೆ ಬಿದ್ರೂ ಬಿಡದೆ ಕಾರ್ ಚೇಜ್ ಮಾಡಿ ನಿಲ್ಲಿಸಿದ ಪೊಲೀಸರು.

ಕಾರಿನಲ್ಲಿ ಬ್ಯಾಗಿನಲ್ಲಿ ತುಂಬಿಟ್ಟಿದ್ದ ಐನೂರು, ಇನ್ನೂರು, ನೂರು ಮತ್ತು ಐವತ್ತು ರುಪಾಯಿ ಮುಖ ಬೆಲೆಯ ಎಂಬತ್ತೈದು ಲಕ್ಷ ರುಪಾಯಿ ಹಣ ಜಪ್ತಿ.

ನೀಲಿ ಬಣ್ಣದ ಗ್ಲಾಂಜಾ‌‌ ಕಾರಿನಲ್ಲಿ ಅಕ್ರಮವಾಗಿ ಹಣ ಸಾಗಿಸುತ್ತಿದ್ದ ಆರೋಪಿಗಳು.

ಆರೋಪಿಗಳಾದ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ನಿಜ್ಜೂರು ಗ್ರಾಮದ ಫಯಾಜಖಾನ್ (31 ವರ್ಷ), ಇಮ್ರಾನ್ ಖಾನ್ (27 ವರ್ಷ) ಮತ್ತು ಶಿವಮೊಗ್ಗ ಜಿಲ್ಲೆ ಸಾಗರದ ಸದ್ಧಾಂಖಾನ್ (23 ವರ್ಷ) ಮತ್ತು ಸಯ್ಯದ ಅಮೀನ್ (29 ವರ್ಷ) ಬಂಧನ.

ಎಸ್ಪಿ ಹನುಮಂತರಾಯ ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿರೋ ಪೊಲೀಸರು.

ಹಾನಗಲ್ ಸಿಪಿಐ ಶಿವಶಂಕರ ಗಣಾಚಾರಿ ಹಾಗೂ ಪಿಎಸ್ಐ ಶ್ರೀಶೈಲ ಪಟ್ಟಣಶೆಟ್ಟಿ ನೇತೃತ್ವದ ತಂಡದಿಂದ ಕಾರ್ಯಾಚರಣೆ.

ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.


Spread the love

Leave a Reply

Your email address will not be published. Required fields are marked *