ತಾವೇ ಡಿಕ್ಕಿ ಹೊಡೆದು ಲಾರಿ ನಿಲ್ಲಿಸಿರುವ ಪೊಲೀಸರು: ಮಂತ್ರಿ ಬೆಂಗಾವಲು ಪಡೆಯ ಕರಾಮತ್ತು
1 min readಹುಬ್ಬಳ್ಳಿ: ಸಚಿವ ಸಿ.ಸಿ.ಪಾಟೀಲರಿಗೆ ಬೆಂಗಾವಲು ಮಾಡುತ್ತಿದ್ದ ಪೊಲೀಸರ ವಾಹನವೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪೊಲೀಸ್ ವಾಹನದ ಮುಂಭಾಗ ನಜ್ಜುಗುಜ್ಜಾದ ಘಟನೆ ನಗರದ ಹೊರವಲಯದಲ್ಲಿರುವ ಗಬ್ಬೂರ ಬೈಪಾಸ್ ಬಳಿ ಸಂಭವಿಸಿದೆ.
ಥಾಣೆಯ ಅಜಯ ರಣವೀರ ಶೋರನ್ ಎಂಬುವವರಿಗೆ ಸೇರಿದ ಗೂಡ್ಸ್ ಲಾರಿಯ ಹಿಂಭಾಗದಲ್ಲಿ ಪೊಲೀಸರೇ ಚಲಾಯಿಸುತ್ತಿದ್ದ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ, ಪೊಲೀಸ್ ವಾಹನದ ಮುಂಭಾಗ ಸಂಪೂರ್ಣವಾಗಿ ಕಳಚಿಬಿದ್ದಿದೆ.
ತಾವೂ ಮಾಡಿರುವ ತಪ್ಪನ್ನ ಲಾರಿ ಚಾಲಕನ ಮೇಲೆ ಹಾಕುವ ಪ್ರಯತ್ನದಲ್ಲಿ ಪೊಲೀಸರಿದ್ದು, ಲಾರಿಯನ್ನೂ ನಿಲ್ಲಿಸಿಕೊಂಡು ನಿಂತಿದ್ದಾರೆ. ಇದರಿಂದ ಲಾರಿ ಚಾಲಕ ಮಹೇಶ, ಗಾಬರಿಯಿಂದ ಏನೂ ತಿಳಿಯದಂತಾಗಿ ಬೈಪಾಸನಲ್ಲಿ ನಿಲ್ಲುವಂತಾಗಿದೆ.
ಆರಕ್ಷಕರು ತಾವೂ ಮಾಡಿದ ಪ್ರಮಾದವನ್ನ ಒಪ್ಪಿಕೊಂಡು ಲಾರಿಯನ್ನ ಬಿಟ್ಟು ಕಳಿಸುತ್ತಾರಾ ಅಥವಾ ಲಾರಿಯ ಮೇಲೆ ಪ್ರಕರಣ ದಾಖಲು ಮಾಡುತ್ತಾರಾ ಎಂಬುದನ್ನ ಕಾದು ನೋಡಬೇಕಿದೆ.