ಕೋರ್ಟ್ ವೃತ್ತದಲ್ಲಿ ಸಂಚಾರಿ ಠಾಣೆ ಪೊಲೀಸರೇನು ಮಾಡಿದ್ರು ಗೊತ್ತಾ…!?
1 min readಧಾರವಾಡ: ಕೊರೋನಾ ಪ್ರಕರಣಗಳು ಹೆಚ್ಚಾಗಿ ಅವಳಿನಗರದಲ್ಲೂ ಆಕ್ಸಿಜನ್ ಗಾಗಿ ಪರದಾಟ ನಡೆಯುತ್ತಿರುವ ಸಮಯದಲ್ಲೇ ಮರಗಳಿಂದ ನಮಗೇನು ಉಪಯೋಗ ಎಂಬುದನ್ನ ತೋರಿಸಲು ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಮುಂದಾಗಿದ್ದಾರೆ.
ಧಾರವಾಡದ ಕೋರ್ಟ್ ಬಳಿಯಲ್ಲಿ ಮರವೊಂದನ್ನ ನೆಟ್ಟು ತಮ್ಮತನವನ್ನ ಪ್ರದರ್ಶನ ಮಾಡಿದ ಸಂಚಾರಿ ಠಾಣೆಯ ಎಎಸ್ಐಗಳಾದ ಎಂ.ಎಸ್.ಕರಗಣ್ಣನವರ, ಎಸ್.ಸಿ. ಮಣಕವಾಡ, ಹವಾಲ್ದಾರ ಬಿ.ಕೆ.ಲಮಾಣಿ, ಬಸವರಾಜ ಡೊಂಬರಕೊಪ್ಪ, ಎ.ಎ.ಸೌದಾಗರ ಸಾರ್ವಜನಿಕರ ಗೌರವಕ್ಕೆ ಪಾತ್ರವಾಗಿದ್ದಾರೆ.
ಜನರು ಮರಗಳನ್ನ ಬೆಳೆಸಬೇಕು. ಇದರಿಂದ ಬದುಕು ಎಂಬುದನ್ನ ತೋರಿಸುವ ಪ್ರಯತ್ನಕ್ಕೆ ಮುಂದಾಗಿರುವ ಸಂಚಾರಿ ಠಾಣೆ ಪೊಲೀಸರ ಕ್ರಮ ಪ್ರತಿಯೊಬ್ಬರು ಮೆಚ್ಚುವಂತಿದೆ.