ಎಪಿಎಂಸಿ ಠಾಣೆ ವ್ಯಾಪ್ತಿಯಲ್ಲಿ ಹದಗೆಟ್ಟ ವಾತಾವರಣ: ಸಾಮೂಹಿಕ ವರ್ಗಾವಣೆಗೆ ಸಿದ್ಧವಾದ ಇಡೀ ಠಾಣೆ ಸಿಬ್ಬಂದಿ
1 min readಹುಬ್ಬಳ್ಳಿ: ನವನಗರ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾತಾವರಣ ಸಂಪೂರ್ಣವಾಗಿ ಹದಗೆಟ್ಟಿದ್ದು, ನಮ್ಮನ್ನ ಈ ಠಾಣೆಯಿಂದ ಮುಕ್ತಿ ಕೊಡಿ ಎಂದು ಇಡೀ ಠಾಣೆಯ ಎಲ್ಲ ಸಿಬ್ಬಂದಿಗಳು ವರ್ಗಾವಣೆ ಮಾಡುವಂತೆ ಮನವಿ ಮಾಡಿಕೊಳ್ಳುವ ಸ್ಥಿತಿಗೆ ಬಂದಿದ್ದಾರೆ.
EXCLUSIVE VIDEO
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ಇತಿಹಾಸದಲ್ಲಿ ಇಂತಹದೊಂದು ಘಟನೆ ಮೊದಲ ಬಾರಿಗೆ ನಡೆಯುತ್ತಿದ್ದು ಠಾಣೆಯ ಇಡೀ ಸಿಬ್ಬಂದಿಗಳು ವರ್ಗಾವಣೆ ಪತ್ರವನ್ನ ಹಿಡಿದುಕೊಂಡು ಠಾಣೆಯ ಮುಂದೆ ಜಮಾಯಿಸಿದ್ದಾರೆ.
ಕಳೆದ ರಾತ್ರಿ ಬಂಧನಕ್ಕೆ ಒಳಗಾಗಿರುವ ರೌಡಿ ಷೀಟರ್ ಪ್ರವೀಣ ಪೂಜಾರಿ, ಕಾಂಗ್ರೆಸ್ ಮುಖಂಡ ಮಲ್ಲಯ್ಯ ಹಿರೇಮಠ ಹಾಗೂ ವಕೀಲರಾದ ವಿನೋದ ಪಾಟೀಲ ಅವರನ್ನ ಬಂಧನ ಮಾಡಲಾಗಿದ್ದು, ಎಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಇದೇ ಮೂವರು ವ್ಯಕ್ತಿಗಳಿಂದ ನವನಗರದಲ್ಲಿ ಹಲವು ದಾಂಧಲೆಗಳು ನಡೆಯುತ್ತಿದ್ದು, ಮೂವರು ಪ್ರಭಾವಿಗಳಾಗಿದ್ದಾರೆ. ಪದೇ ಪದೇ ಇವರಿಂದಲೇ ಸಮಸ್ಯೆ ಉದ್ಭವಿಸುತ್ತಿದ್ದು, ವಾತಾವರಣವೇ ಹದಗೆಟ್ಟು ಹೋಗಿದೆ. ಇದೇ ಕಾರಣಕ್ಕೆ ಪಿಎಸೈ, ಎಎಸ್ಐ, ಹವಾಲ್ದಾರಗಳು ಹಾಗೂ ಸಿಬ್ಬಂದಿಗಳು ವರ್ಗಾವಣೆ ನೀಡಿ, ನಮ್ಮನ್ನ ಉಳಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ.
ಸುಮಾರು 53 ಪೊಲೀಸರು ವರ್ಗಾವಣೆಯನ್ನ ಕೇಳಿದ್ದು, ನವನಗರದ ಎಪಿಎಂಸಿ ಠಾಣೆಯ ಸ್ಥಿತಿ ಇಲ್ಲಿಗೆ ಬಂದಿರುವುದು ಪೊಲೀಸ್ ಇಲಾಖೆಯ ಇಂದಿನ ಸ್ಥಿತಿಗೆ ಕಾರಣವಾಗಿದೆ.