“ದಗಲಬಾಜಿ ಪೊಲೀಸಪ್ಪ” ಪ್ರಕರಣ- ಮೀಸೆ ಮಾವ ಸೇರಿದಂತೆ ಮೂವರು ಅಮಾನತ್ತು: ಇದು ಕರ್ನಾಟಕವಾಯ್ಸ್.ಕಾಂ 100% ಇಂಪ್ಯಾಕ್ಟ್…!

ಹುಬ್ಬಳ್ಳಿ: ಅವಳಿನಗರದ ಪೊಲೀಸ್ ಇತಿಹಾಸದಲ್ಲಿ ನಡೆದ ದಗಲಬಾಜಿ ಪ್ರಕರಣವನ್ನ ಹೊರಗೆ ಹಾಕಿದ್ದ ಕರ್ನಾಟಕವಾಯ್ಸ್.ಕಾಂ ನ ಬಿಗ್ ಇಂಪ್ಯಾಕ್ಟ್. ಪ್ರಕರಣ ಹೊರಗೆ ಹಾಕಿದ ತಕ್ಷಣವೇ ವಿಚಾರಣೆಗೆ ಆದೇಶ ಮಾಡಿದ್ದ ಪೊಲೀಸ್ ಕಮೀಷನರ್ ಲಾಬುರಾಮ್ ಅವರು, ಪೂರ್ಣ ಪ್ರಮಾಣದ ಮಾಹಿತಿ ಕಲೆ ಹಾಕಿದ್ದು, ಪಿಎಸ್ಐ ವಿರುದ್ಧ ಷಢ್ಯಂತ್ರ ರೂಪಿಸಿದ್ದ ಪೊಲೀಸ್ ಮಾಣಿಕ ಪಟ್ಟೇದ ಹಾಗೂ ಘಟನೆಯಲ್ಲಿ ಭಾಗಿಯಾಗಿದ್ದರೆನ್ನಲಾದ ಪಿಎಸ್ಐ ರವಿ ಹಾಗೂ ಮತ್ತೋರ್ವ ಪೊಲೀಸ್ ಸಿದ್ಧು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.
ದಗಲಬಾಜಿ ನಡೆದ ಬಗ್ಗೆ ಸಾಕ್ಷ್ಯ ನೀಡಿದ್ದ ವೀಡಿಯೋ ಇಲ್ಲಿದೆ ನೋಡಿ..
ಈ ಮಾಹಿತಿ ಹೊರಗೆ ಬಿದ್ದ ಕೆಲವೇ ನಿಮಿಷಗಳಲ್ಲಿ ತನಿಖೆಗೆ ಪೊಲೀಸ್ ಕಮೀಷನರ್ ಮುಂದಾಗಿದ್ದು, ಡಿಸಿಪಿ ಕೆ.ರಾಮರಾಜನ್ ಅವರಿಗೆ ಹೊಣೆಗಾರಿಕೆ ಕೊಟ್ಟಿದ್ದರು. ತನಿಖೆ ಕೈಗೊಂಡಿದ್ದ ಡಿಸಿಪಿಯವರು ಪಿಎಸೈ ವಿರುದ್ಧ ತಾಯಿ-ಮಗನನ್ನ ಬಳಕೆ ಮಾಡಿದ್ದ ಪೊಲೀಸ್ ನ ಕ್ವಾಟರ್ಸಗೂ ಹೋಗಿ ಬಂದಿದ್ದರು. ಸುಳ್ಳು ಹೇಳಿಕೆ ನೀಡಿದ್ದ ತಾಯಿ ಮಗನನ್ನೂ ವಿಚಾರಣೆ ಮಾಡಿ, ವರದಿಯನ್ನ ನೀಡಿದ್ದರು.
ವರದಿಯ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಯ ವಿರುದ್ಧ ಷಢ್ಯಂತ್ರ ರೂಪಿಸಿದ್ದ ಪೊಲೀಸ್ ಮಾಣಿಕ ಪಟ್ಟೇದ ಸೇರಿದಂತೆ ಮೂವರನ್ನ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ.
ಕರ್ನಾಟಕವಾಯ್ಸ್.ಕಾಂ ಈ ಮಾಹಿತಿಯನ್ನ ಕಲೆ ಹಾಕಲು ಕಾರಣವಾಗಿದ್ದು, ಪೊಲೀಸ್ ಇಲಾಖೆ ಮೇಲಿನ ಗೌರವಕ್ಕೆ. ಓರ್ವ ಪೇದೆ ತನ್ನದೇ ಠಾಣೆಯ ಪಿಎಸೈ ವಿರುದ್ಧ ಕುತಂತ್ರ ರೂಪಿಸುವುದು ಉತ್ತಮ ಬೆಳವಣಿಗೆಯಲ್ಲ. ಇಲ್ಲಿ ಹಣ ತಿಂದರೂ, ಹಾಗೇ ಮಾಡಿದ್ರೂ, ಹೀಗೆ ಮಾಡಿದ್ರೂ ಎಂದುಕೊಳ್ಳುವುದಲ್ಲ. ಎಂಬುದನ್ನ ನಿರೂಪಿಸಲಷ್ಟೇ ಮಾಡಿದ್ದು ಎಂಬುದು. ಅದಕ್ಕೆ ತಕ್ಕ ಬೆಲೆಯನ್ನ ಮಾಣಿಕ ಪಟ್ಟೇದ ತೆತ್ತಿದ್ದಾನೆ. ಇಂತಹದಕ್ಕೆ ಪ್ರೋತ್ಸಾಹ ನೀಡಿದ ಮನಸ್ಸುಗಳಿಗೂ ಇದು ಅರ್ಥವಾಗಬೇಕಿದೆ.