ಗಾಂಜಾ ಪ್ರಕರಣ: ಅಮಾನತ್ತಾಗಿದ್ದ ASI, HC, PC ಗಳಿಗೆ ನ್ಯೂಯರ್ ಗಿಫ್ಟ್ ನೀಡಿದ ಪೊಲೀಸ್ ಕಮೀಷನರ್….!
1 min readಹುಬ್ಬಳ್ಳಿ: ಅವಳಿನಗರದ ಪೊಲೀಸರು ತಲೆತಗ್ಗಿಸುವಂತ ಕಾರ್ಯ ಮಾಡಿ ಅಮಾನತ್ತಾಗಿ ಪೊಲೀಸ್ ಸಿಬ್ಬಂದಿಗಳಿಗೆ ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಹೊಸ ವರ್ಷದ ಗಿಫ್ಟ್ ನೀಡಿದ್ದಾರೆ.
ಹುಬ್ಬಳ್ಳಿಯ ಎಪಿಎಂಸಿಯಲ್ಲಿ ಗಾಂಜಾ ಪ್ರಕರಣದಲ್ಲಿ ಪೊಲೀಸರೇ ಆರೋಪಿಗಳಂತೆ ವರ್ತನೆ ಮಾಡಿದ ಹಿನ್ನೆಲೆಯಲ್ಲಿ, ಇನ್ಸಪೆಕ್ಟರ್ ಸೇರಿ ಏಳು ಜನರನ್ನ ಪೊಲೀಸ್ ಕಮೀಷನರ್ ಅಮಾನತ್ತು ಮಾಡಿದ್ದರು.
ಈ ಪ್ರಕರಣದಲ್ಲಿದ್ದ ಎಪಿಎಂಸಿ ಠಾಣೆಯ ಎಎಸ್ಐ ಎಸ್.ಕೆ.ಕರಿಯಪ್ಪಗೌಡರ, ನಾಗರಾಜ ಗುಡಿಮನಿ, ವಿಕ್ರಮ ಪಾಟೀಲ, ಶಿವರಾಜಕುಮಾರ ಮೇತ್ರಿ, ಎಂ.ಸಿ.ಹೊನ್ನಪ್ಪನವರ ಹಾಗೂ ದಿಲಶಾದ ಮುಲ್ಲಾ ಅವರ ಅಮಾನತ್ತನ್ನ ಪೊಲೀಸ್ ಕಮೀಷನರ್ ಬಿಡುಗಡೆಗೊಳಿಸಿ, ಅವರನ್ನ ಬೇರೆ ಬೇರೆ ಠಾಣೆಗಳಿಗೆ ವರ್ಗಾವಣೆ ಮಾಡಿದ್ದಾರೆ.
ಇವರ ಮೇಲೆ ಇಲಾಖಾ ವಿಚಾರಣೆಯನ್ನ ಬಾಕಿಯಿರಿಸಿ, ಈ ಆದೇಶವನ್ನ ಮಾಡಿದ್ದು, ಅಮಾನತ್ತಾಗಿದ್ದವರಿಗೆ ಹೊಸ ವರ್ಷದ ಗಿಫ್ಟ್ ಸಿಕ್ಕಂತಾಗಿದೆ. ಬಡವರನ್ನ ಹಣದ ಮೂಲಕ ಹೆದರಿಸುವವರಿಗೆ ಇದೊಂದು ಪಾಠವಾಗತ್ತಾ ಎಂಬುದನ್ನ ಕಾದು ನೋಡಬೇಕಿದೆ.