ಅಪ್ಪ ಮಾಡಿದ ಸಾಲ ತೀರಿಸಲಾಗದೇ ನೇಣಿಗೆ ಶರಣಾದ ಪೊಲೀಸ್…!
1 min readಬಳ್ಳಾರಿ: ತಂದೆ ಮಾಡಿದ ಸಾಲವನ್ನ ತೀರಿಸಲು ಆಗದೇ ಮನನೊಂದ ಪೊಲೀಸ್ ಕಾನ್ಸಟೇಬಲ್ ರೋರ್ವರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಚಿಕ್ಕಅಂತಾಪುರ ಗ್ರಾಮದಲ್ಲಿ ಸಂಭವಿಸಿದೆ.
ಬಸನಗೌಡ ಎಂಬ ಪೇದೆ ಸಾವಿಗೀಡಾಗಿದ್ದು, ಇವರ ತಂದೆ ತಮಿಳುನಾಡಿನ ಕೃಷಿ ಕಂಪನಿಯಿಂದ ಮೋಸ ಹೋಗಿದ್ದ ಪರಿಣಾಮ ಸುಮಾರು 2ಕೋಟಿ ರೂಪಾಯಿ ಸಾಲವಾಗಿತ್ತು. ಆ ಸಾಲವನ್ನ ತೀರಿಸಲು ಆಗದ ಕಾರಣ, ಮಲಗಿದಾಗಲೇ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ.
ತಂದೆ ಮಾಡಿದ ಸಾಲದಿಂದ ಹಲವರು ಮನೆಗೆ ಬಂದು ಕಿರಿಕಿರಿ ಮಾಡುತ್ತಿದ್ದರು. ಇದನ್ನ ನೋಡುತ್ತಿದ್ದ ಪೊಲೀಸ್ ಬಸನಗೌಡ, ಇಷ್ಟೊಂದು ಪ್ರಮಾಣದ ಹಣವನ್ನ ಹೊಂದಿಸುವುದು ಕಷ್ಟಸಾಧ್ಯವೆನಿಸಿ, ಸಾವಿಗೆ ಶರಣಾಗಿದ್ದಾನೆಂದು ಹೇಳಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.