ಧಾರವಾಡ- ಪೊಲೀಸ್ ಠಾಣೆಗೆ ಶಾಸಕ: ಆ ಪಿಎಸೈ ಮಾಡಿದ್ದ ಕೆಲಸವಾದರೂ ಏನು..?
ಅಣ್ಣಿಗೇರಿ: ಜನಪ್ರತಿನಿಧಿಯಾಗಿ ಅವರು ಯಾವತ್ತೂ ಪೊಲೀಸ್ ಠಾಣೆಗೆ ಹೋಗಿರಲೇ ಇಲ್ಲ. ಆದರೆ, ಇವತ್ತೂ ಅಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದಕ್ಕೆ ಕಾರಣವಾಗಿದ್ದು, ಪಿಎಸೈ ಮಾಡಿದ ಕೆಲಸ. ಹೌದು.. ಪಿಎಸೈ ಆ ಠಾಣೆಯಲ್ಲಿ ಯಾರೂ ಮಾಡದ ಕೆಲಸವನ್ನ ಮಾಡಿದ್ದಾರೆ. ಅದೇನು ಗೊತ್ತಾ.. ಈ ವರದಿಯನ್ನ ಪೂರ್ಣವಾಗಿ ಓದಿ..
ನವಲಗುಂದ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಂಕರ ಪಾಟೀಲಮುನೇನಕೊಪ್ಪರನ್ನ ತಮ್ಮ ಠಾಣೆಗೆ ಬರುವಂತೆ ಮಾಡಿದ್ದು ಅಣ್ಣಿಗೇರಿ ಠಾಣೆಯ ಪಿಎಸೈ ಲಾಲಸಾಬ ಜೂಲಕಟ್ಟಿ.
ಹೌದು.. ಪೊಲೀಸ್ ಠಾಣೆಯನ್ನ ಸ್ವತಃ ಮನೆಯಂತೆ ಪ್ರೀತಿಸುವ ಪಿಎಸೈ ಜೂಲಕಟ್ಟಿ, ಅದನ್ನಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ. ಪಾಳು ಬಿದ್ದ ಜಾಗದಲ್ಲಿ ಗಾರ್ಡನ್ ನಿರ್ಮಾಣ ಮಾಡಿ ಎಲ್ಲರೂ ಮೆಚ್ಚುವಂತೆ ಮಾಡಿದ್ದಾರೆ.
ಶಾಸಕ ಶಂಕರ ಪಾಟೀಲಮುನೇನಕೊಪ್ಪ ಕೂಡಾ ಇದೇ ಕಾರಣಕ್ಕೆ ಪೊಲೀಸ್ ಠಾಣೆಗೆ ತೆರಳಿ, ಠಾಣೆಯ ಎಲ್ಲರಿಗೂ ಅಭಿನಂದನೆ ತಿಳಿಸಿದರು. ಪಿಎಸೈ ಜೂಲಕಟ್ಟಿಯವರ ಆಸಕ್ತಿಯನ್ನ ಕೊಂಡಾಡಿದರು.
ಓರ್ವ ಪಿಎಸೈ ಸಮಾಜಕ್ಕೆ ಮಾದರಿಯಾಗುವ ಹಾಗೇ ಇರಬೇಕೆಂದು ತೋರಿಸುವಷ್ಟು ಜೂಲಕಟ್ಟಿ ಕಾರ್ಯನಿರ್ವಹಣೆ ಮಾಡುತ್ತಿರುವುದು ಶ್ಲಾಘನೀಯ.