ಪೆಟ್ರೋಲ್ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪೊಲೀಸ್: ಅಯ್ಯೋ… ಆರಕ್ಷಕರ ಸ್ಥಿತಿ…!
1 min readರಾಯಚೂರು: ಪೆಟ್ರೋಲ್ ಸುರಿದುಕೊಂಡು ಸಜೀವ ದಹನಕ್ಕೆ ಇಂಡಿಯನ್ ರಿಸರ್ವ್ ಬೆಟಾಲಿಯನ್ ಪೊಲೀಸ್ ಶರಣಪ್ಪ ಮೇಟಿ ಯತ್ನಿಸಿದ ಘಟನೆ ರಾಯಚೂರ ನಗರದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಕಚೇರಿ ಮುಂದೆ ನಡೆದಿದೆ.
ಮೈ ಮೇಲೆ ಪೆಟ್ರೋಲ್ ಸುರಿದುಕೊಳ್ತಿದ್ದದನ್ನ ಕಂಡು ಪೆಟ್ರೋಲ್ ಬಾಟಲ್ ಕಿತ್ತುಕೊಂಡು ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ. ಸ್ವಲ್ಪದರಲ್ಲೆ ಪ್ರಾಣಾಪಾಯದಿಂದ ರಿಸರ್ವ ಪೊಲೀಸ್ ಶರಣಪ್ಪ ಮೇಟಿ ಪಾರಾಗಿದ್ದಾನೆ.
ಲಿಂಗಸುಗೂರ ತಾಲೂಕಿನ ಬಯ್ಯಾಪುರ ಬಾಲಕರ ವಸತಿ ಶಾಲೆಯ ರಾತ್ರಿ ಕಾವಲುಗಾರನಾಗಿದ್ದ ಮೇಟಿ. ಇಂಡಿಯನ್ ರಿಸರ್ವ ಬೆಟಾಲಿಯನ್ ಪೊಲೀಸ್ ಹುದ್ದೆಗೆ ಆಯ್ಕೆಯಾಗಿದ್ದಾನೆ. ಜೂನ್ 16, 2019 ಕ್ಕೆ ಸಮಾಜ ಕಲ್ಯಾಣ ಇಲಾಖೆಯ ಕಾವಲುಗಾರ ಕೆಲಸಕ್ಕೆ ರಾಜೀನಾಮೆ ನೀಡಿದ್ದರೂ ಕೂಡಾ ಸಮಾಜ ಕಲ್ಯಾಣ ಇಲಾಖೆ ರಾಜೀನಾಮೆ ಅಂಗೀಕರಿಸಿಲ್ಲ. ರಾಯಚೂರ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಮೇಟಿಯನ್ನ ಸೇವೆಯಿಂದ ಬಿಡುಗಡೆಯನ್ನೂ ಮಾಡಿಲ್ಲ. ಹೀಗಾಗಿ ಕಳೆದ ಒಂದು ವರ್ಷದಿಂದ ಮುನಿರಾಬಾದ ಇಂಡಿಯನ್ ರಿಸರ್ವ ಬೆಟಾಲಿಯಲ್ಲಿ ಕೆಲಸ ಮಾಡ್ತಿರುವ ಮೇಟಿಗೆ ಸಂಬಳವಾಗಿಲ್ಲ.
ಹೀಗಾಗಿ ತನ್ನ ರಾಜೀನಾಮೆ ಅಂಗೀಕರಿಸಿ ಸೇವೆಯಿಂದ ರಿಲೀವ್ ಮಾಡಲು ರಾಯಚೂರ ಸಮಾಜ ಕಲ್ಯಾಣ ಇಲಾಖೆಗೆ ಅಲೆದು ಅಲೆದು ಸುಸ್ತಾಗಿದ್ದಾನೆ. ಈ ಬಡಪಾಯಿ ರಿಸರ್ವ ಪೊಲೀಸ್ ಮನವಿಗೆ ಯಾರೊಬ್ಬರು ಸ್ಪಂದಿಸ್ತಿಲ್ಲ. ಹೀಗಾಗಿ ಮನ ನೊಂದು ಶುಕ್ರವಾರ ಸಮಾಜ ಕಲ್ಯಾಣ ಇಲಾಖೆ ಕಛೇರಿ ಮುಂದೆ ಸಜೀವವಾಗಿ ದಹಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಮುಂದೆ ನಿಂತು ತನಗಾದ ಅನ್ಯಾಯದ ಬಗ್ಗೆ ಕೂಗಾಡಿದ್ದಾನೆ.