ಪೊಲೀಸರ ಗೌರವ ಹೆಚ್ಚಿಸುವ “ಸ್ಲೌಚ್ ಹ್ಯಾಟ್” ಹುಬ್ಬಳ್ಳಿಯ ಬೀದಿಗಳಲ್ಲಿ …!
1 min readಹುಬ್ಬಳ್ಳಿ: ಇಲಾಖೆಯ ಗೌರವವನ್ನ ನಿವೃತ್ತಿಯಾಗುವವರೆಗೂ ತಲೆಯ ಮೇಲೆ ಬಿಂಬಿಸಿಕೊಳ್ಳುವ ಸ್ಲೌಚ್ ಹ್ಯಾಟ್ ಗಳನ್ನ ಕೆಲವರು ಎಲ್ಲೆಂದರಲ್ಲಿ ಒಗೆದ ಪ್ರಕರಣ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದ್ದು, ನಗರದ ಪ್ರಮುಖ ಸ್ಥಳಗಳಲ್ಲಿಯೇ ಕಂಡು ಬಂದಿವೆ.
ಹೌದು.. ಹುಬ್ಬಳ್ಳಿಯ ಸಿಆರ್ ಪೊಲೀಸರು ಹಾಗೂ ಸಂಚಾರಿ ಠಾಣೆ ಪೊಲೀಸರನ್ನ ಇದೇ ಹ್ಯಾಟ್ ಗಳಿಂದ ಸಾರ್ವಜನಿಕರು ಗುರುತಿಸುತ್ತಾರೆ. ಡ್ಯೂಟಿ ಮಾಡುವ ಸಮಯದಲ್ಲಿ ಇದು ಇದ್ದರೇನೆ, ಪೊಲೀಸರಿಗೊಂದು ಗತ್ತು ಇರತ್ತೆ. ಆದರೆ, ಅವುಗಳನ್ನ ಎಲ್ಲೆಂದರಲ್ಲಿ ಒಗೆದಿರುವುದು ಸೋಜಿಗ ಮೂಡಿಸಿದೆ.
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಸಶಸ್ತ್ರ ಮೀಸಲು ಪಡೆಯ ಪೊಲೀಸರು ಬಳಕೆ ಮಾಡುವ ಸ್ಲೌವ್ ಚಾಟ್ ಗಳನ್ನ ರಟ್ಟಿನಲ್ಲಿ ಬಾಕ್ಸನಲ್ಲಿ ಹಾಕಿ ಕೆಳಗಡೆ ಒಗೆಯಲಾಗಿದೆ. ಮಿರಾಜನಕರ ಪೆಟ್ರೋಲ್ ಪಂಪ್ ಬಳಿಯಲ್ಲಿ ಸಂಚಾರಿ ಠಾಣೆಯ ಪೊಲೀಸರು ಬಳಕೆ ಮಾಡಿದ, ಹ್ಯಾಟ್ ಗಳನ್ನ ಕಸದ ರಾಶಿಯಲ್ಲಿ ಹಾಕಲಾಗಿದೆ.
ಶಿಸ್ತು ಅಂದರೇ, ಪೊಲೀಸರು ಎಂದುಕೊಂಡ ಸಮಾಜಕ್ಕೆ ಇಂತಹ ದೃಶ್ಯಗಳು ಸೋಜಿಗ ಮತ್ತು ಬೇಸರವನ್ನುಂಟು ಮಾಡುತ್ತವೆ. ತಮ್ಮದೇ ಗೌರವವನ್ನ ಪ್ರತಿಕ್ಷಣ ಕಾಪಾಡುವ ಸ್ಲೌವ್ ಹ್ಯಾಟ್ ಗಳನ್ನ ಹೀಗೆ ಕಸದಲ್ಲಿ ಒಗೆಯುವುದು ಎಷ್ಟು ಸೂಕ್ತ ಎಂಬುದನ್ನ ಪೊಲೀಸರು ಅರ್ಥ ಮಾಡಿಕೊಳ್ಳಬೇಕಿದೆ.