Posts Slider

Karnataka Voice

Latest Kannada News

ಹು/ಧಾ: ಅಧಿಕಾರಿಗಳ ಆತ್ಮಸ್ಥೆರ್ಯ ಕುಗ್ಗಿಸಲು “ರೂಮರ್” ಹಬ್ಬಿಸಲು ಮುಂದಾಗಿರೋ ನೀಚರು…!!!

1 min read
Spread the love

ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ಕೆಲವರು ಹಿರಿಯ ಅಧಿಕಾರಿಗಳ ಬಗ್ಗೆ “ಫುಕಾರು” ಗಳನ್ನ ಹಬ್ಬಿಸುವ ಮೂಲಕ ರಾಜಕೀಯ ತಂತ್ರ ಹೊಸೆಯುವ ಆಸಾಮಿಗಳಿಗೆ ಕಾಲಾಳುಗಳಾಗಿ ಕೆಲಸ ಮಾಡುತ್ತಿರುವುದು ರಹಸ್ಯವಾಗಿ ಉಳಿದಿಲ್ಲ.

ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಹೆಚ್ಚುತ್ತಿರುವ ಕ್ರೈಂ ಪ್ರಕರಣಗಳನ್ನ ತಡೆಗಟ್ಟಲು ಹಿರಿಯ ಅಧಿಕಾರಿಗಳನ್ನು ಒಳಗೊಂಡ ಎಲ್ಲರೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಇದೇ ಹುಬ್ಬಳ್ಳಿಯಲ್ಲಿ ರುಂಡ ಮುಂಡ ಬೇರೆ ಬೇರೆ ಕಡೆ ಒಗೆದು ಬೀಭತ್ಸ ಹತ್ಯೆಯಾಗಿದ್ದನ್ನೂ ಸ್ಮರಿಸಬಹುದು.

 

ಈಗ ಕೆಲವು ಭಟ್ಟಂಗಿಗಳು ಆ ಇನ್ಸಪೆಕ್ಟರ್ ಹಿಂಗಂತೆ, ಆ ಅಧಿಕಾರಿದು ಹಿಂಗಾಗಿದೆಯಂತೆ, ಅವನು ಅಷ್ಟಕ್ಕೆ ಬೇಡಿಕೆ ಇಟ್ಟಿದ್ದಾನಂತೆ ಎಂದು ಒಬ್ಬೊಬ್ಬರ ಕಿವಿಯಲ್ಲಿ ಹೇಳಿ, ಅದನ್ನ ಸುದ್ದಿಯಾಗಿಸಿ ಅಧಿಕಾರಿಗಳ ತಲೆದಂಡ ಮಾಡಿಸಲು ಕೂತಿರುವ ನೀಚರಿಗೆ ಬಕಪಕ್ಷಿಗಳಂತೆ ಕೆಲವರು ವರ್ತನೆ ಮಾಡುತ್ತಿದ್ದಾರೆ.

ಹೆಣದ ಮನೆಯಲ್ಲಿ ಕೂತು ಹಣದ ವ್ಯವಹಾರ ಮಾಡಿ, ಮನೆಯಲ್ಲಿನ ಹೆಂಡತಿ-ಮಕ್ಕಳಿಗೆ ಹೊಸ ಬಟ್ಟೆ ಬರೆ ಕೊಡಿಸುವ ಸಮಾಜದಲ್ಲಿ ನೈತಿಕತೆಯನ್ನ ಮಾತನಾಡುತ್ತ ಕೂಡುವ ಜಾಯಮಾನ ಬೆಳೆಸಿಕೊಂಡವರಿಗೆ ಬೇರೆನೂ ಇರಲ್ಲ ಬಿಡಿ.

ಹುಬ್ಬಳ್ಳಿ ಧಾರವಾಡ ಪೊಲೀಸರು ತಮ್ಮ ವಯಕ್ತಿಕ ಜೀವನವನ್ನ ಬದಿಗೆ ಸರಿಸಿ, ಸಾರ್ವಜನಿಕರ ನೆಮ್ಮದಿಗಾಗಿ ಹಗಲಿರುಳು ಶ್ರಮಿಸುತ್ತ ಬಂದಿದ್ದಾರೆ. ಮುಂದೆನೂ ಹಾಗೇ ನಡೆದುಕೊಳ್ಳುತ್ತಾರೆ. ಒಂದು “ರೂಮರ್” ಹಬ್ಬಿಸುವ ಮುನ್ನ ತಾನು ಎಂತವ ಎಂಬುದನ್ನ ಅರಿತುಕೊಂಡು ನಡೆಯುವುದು ಮಾನವಂತರಿಗೆ ಮಾತ್ರ ಅರಿಯವಾಗತ್ತೆ.


Spread the love

Leave a Reply

Your email address will not be published. Required fields are marked *

You may have missed