ಪೊಲೀಸ್ ತಂಡದೆದುರು ಸೋತ ಪತ್ರಕರ್ತರ ತಂಡ: ಕರ್ತವ್ಯದ ನಡುವೆ ರಿಲೀಫ್….!

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ನಡುವೆ ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ಕ್ರಿಕೆಟ್ ಪಂದ್ಯಾವಳಿಯನ್ನ ಹುಬ್ಬಳ್ಳಿ ಜಿಮಖಾನಾ ಮೈದಾನದಲ್ಲಿ ಹಮ್ಮಿಕೊಳ್ಳಲಾಯಿತು.

ಮೀಡಿಯಾ ಇಲೆವೆನ್ ಹಾಗೂ ಕಮೀಷನರೇಟ್ ಇಲೆವೆನ್ ತಂಡದ ನಡುವೆ ಬಾರಿ ಪಂದ್ಯ ನಡೆದಿದ್ದು, ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಮೀಡಿಯಾ ಇಲೆವೆನ್ ತಂಡ 12 ಓವರ್ ನಲ್ಲಿ 8 ವಿಕೆಟ್ ಪತನಕ್ಕೆ 79 ರನ್ ಕಲೆ ಹಾಕಿತು. ಬಳಿಕ ಪೊಲೀಸ್ ಕಮೀಷನರೇಟ್ ತಂಡ 8 ಓವರನಲ್ಲಿ 83 ರನ್ ಗಳಿಸಿ ಗೆಲುವು ಸಾಧಿಸಿತು.
ಪ್ರತಿದಿನವೂ ಜನರ ನೆಮ್ಮದಿಗಾಗಿ ಹಗಲಿರುಳು ದುಡಿಯುವ ಪೊಲೀಸ್ ಅಧಿಕಾರಿಗಳು, ಕೆಲ ಸಮಯದ ವರೆಗೆ ರಿಲೀಫ್ ಆಗಿ ಆಟವಾಡಿದ್ದು, ಅವರಲ್ಲಿನ ಕ್ರೀಡಾ ಮನೋಭಾವನೆಯನ್ನ ತೋರಿಸುತ್ತಿತ್ತು.
ಸಂಘದ ಅಧ್ಯಕ್ಷ ಗಣಪತಿ ಗಂಗೊಳ್ಳಿ, ಡಿಸಿಪಿಗಳಾದ ಸಾಹಿಲ್, ಬಸರಗಿ ಸೇರಿದಂತೆ ಹಲವರು ಪ್ರೇಕ್ಷಕರಾಗಿದ್ದರು.