“ಲವರ್ ಜೊತೆ ಮಲಗಲು ಡಾನ್”ಗೆ ಸಾಥ್ ನೀಡಿದ ಪೊಲೀಸರು.. ಧಾರವಾಡದ ಬಳಿ ನಡೆದ ‘ರಂಗಿನಾಟ’ ಬಯಲು…

ಧಾರವಾಡ: ಇದು ಪೊಲೀಸರ ಇವತ್ತಿನ ಸ್ಥಿತಿ. ಯಾವ ಮಟ್ಟಕ್ಕೆ ಇಲಾಖೆಯಲ್ಲಿನ ಸಿಬ್ಬಂದಿಗಳು ಇಳಿದಿದ್ದಾರೆ ಎಂಬುದನ್ನ ದಕ್ಷ ಅಧಿಕಾರಿಯಾಗಿರುವ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಲಾಬುರಾಮ್ ಪತ್ತೆ ಹಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ಭಯಾನಕ ಹತ್ಯೆಯ ಹಿಂದಿನ ರೂವಾರಿಯಾಗಿರುವ ಡಾನ್ ನನ್ನ ಆತನಿದ್ದ ಜೈಲಿನಿಂದ ಕೋರ್ಟಗೆ ಹಾಜರುಪಡಿಸಲು ಧಾರವಾಡಕ್ಕೆ ಕರೆತರಲಾಗಿತ್ತು. ಅಷ್ಟೇ ಅಲ್ಲ, ಅಲ್ಲಿಂದ ಮರಳಿ ಹೋಗುವಾಗ ಅಸಲಿ ಪ್ರಪಂಚ ಹೊರಬಂದಿದೆ.
ಡಾನ್ ಜೊತೆ ಪೊಲೀಸರೇ ನಗರದ ಪ್ರಮುಖ ಹೊಟೇಲ್ ನಲ್ಲಿ ಕರೆದುಕೊಂಡು ಹೋಗಿದ್ದಾರೆ. ಮೊದಲೇ ನಿರ್ಧಾರವಾಗಿರುವಂತೆ ಡಾನ್ “ಲವರ್” ರೂಮ್ ನಲ್ಲಿ ತಂಗಿದ್ದಾಳೆ. ಡಾನ್ ನನ್ನ ಒಳಗಡೆ ಕಳಿಸಿ, ಬೇರೆ ಜಿಲ್ಲೆಯಿಂದ ಬಂದ ಪೊಲೀಸರು, ಹೊರಗೆ “ಅವರಂತೆ” ಕಾಯುತ್ತಿದ್ದಾರೆ. ಅಷ್ಟರಲ್ಲಾಗಲೇ, ಪೊಲೀಸ್ ಕಮೀಷನರ್ ಲಾಬುರಾಮ್ ಅವರು ದಕ್ಷ ಪೊಲೀಸ್ ಇನ್ಸಪೆಕ್ಟರುಗಳನ್ನ ಕಳಿಸಿ ರೇಡ್ ಮಾಡಿಸಿದಾಗ, ಡಾನ್ “ಆ” ರೂಪದಲ್ಲಿ ಸಿಕ್ಕು ಬಿದ್ದಿದ್ದು, ತಲೆಹಿಡುಕರಂತೆ ನಿಂತಿರುವ ಪೊಲೀಸರು ಗಾಬರಿಯಾಗಿ ಅಲೆಯುವಂತಾಗಿದೆ.