ಧಾರವಾಡದಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ಬಯಲು…!
1 min readಧಾರವಾಡ: ನಗರದಲ್ಲಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆಯನ್ನ ಬಯಲು ಮಾಡುವಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟಿನ ಸಿಸಿಬಿ ತಂಡ ಯಶಸ್ವಿಯಾಗಿದ್ದು, ಕೊರೋನಾ ಸಮಯದಲ್ಲಿ ನಡೆದ ಪೊಲೀಸರ ಬೃಹತ್ ದಾಳಿ ಇದಾಗಿದೆ.
ಧಾರವಾಡದ ಮಗದುಮ್ ಕಲ್ಯಾಣ ಮಂಟಪದ ಹಿಂಭಾಗದ ಸಿಬಿನಗರವೆಂದು ಕರೆಯಲ್ಪಡುವ ಚೆನ್ನಬಸವೇಶ್ವರ ನಗರದ ಮನೆಯೊಂದರಲ್ಲಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆಯಲ್ಲಿ ನಾಲ್ಕು ಬೇರೆ ರಾಜ್ಯದ ಮಹಿಳೆಯರನ್ನ ರಕ್ಷಣೆ ಮಾಡಲಾಗಿದ್ದು, ನಾಲ್ವರು ವಿಟಪುರುಷರು ಹಾಗೂ ಓರ್ವ ಪಿಂಪ್ ನ್ನ ಬಂಧನ ಮಾಡುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊರೋನಾ ಲಾಕ್ ಡೌನ್ ಮುಗಿದ ನಂತರ ಅಂತರ್ ರಾಜ್ಯ ವಾಹನಗಳು ಆರಂಭಗೊಂಡ ಕೆಲವೇ ದಿನಗಳಲ್ಲಿ ಧಾರವಾಡದಲ್ಲಿ ವೇಶ್ಯಾವಾಟಿಕೆಯನ್ನ ನಡೆಸಲಾಗುತ್ತಿತ್ತು ಎಂಬ ಅನುಮಾನಗಳು ಇಲಾಖೆಯಲ್ಲಿ ಇದ್ದವು.
ಇಂದು ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಪೊಲೀಸ್ ಇನ್ಸಪೆಕ್ಟರ್ ಭರತ ರೆಡ್ಡಿ, ಅಲ್ತಾಫ ಮುಲ್ಲಾ ತಂಡ ದಂಧೆಯನ್ನ ಬಯಲಿಗೇಳಿಯುವಲ್ಲಿ ಯಶಸ್ವಿಯಾಗಿದ್ದು, ರಕ್ಷಣೆ ಮಾಡಿದ ಯುವತಿಯರು ಹಾಗೂ ದಂಧೆಯಲ್ಲಿ ಭಾಗಿಯಾಗಿದ್ದ ಪಿಂಪ್ ಮತ್ತು ವಿಟಪುರುಷರನ್ನ ಉಪನಗರ ಠಾಣೆಗೆ ಒಪ್ಪಿಸಲಾಗಿದೆ.