ಹುಬ್ಬಳ್ಳಿ ಪೊಲೀಸ್ ಕ್ವಾಟರ್ಸ್ ಟಾರ್ಗೆಟ್ ಮಾಡಿದ್ದ “ರೊಡ್ಡ ಶ್ರೀಕ್ಯಾ” ಅರೆಸ್ಟ್…!

ಹುಬ್ಬಳ್ಳಿ: ನಗರದ ಪೊಲೀಸ್ ವಸತಿ ಗೃಹಗಳನ್ನ ಟಾರ್ಗೆಟ್ ಮಾಡಿ ಕಳ್ಳತನ ಮಾಡಿದ್ದ ಆರೋಪಿಯನ್ನ ಬಂಧನ ಮಾಡುವಲ್ಲಿ ಉಪನಗರ ಠಾಣೆಯ ಇನ್ಸಪೆಕ್ಟರ್ ರವಿಚಂದ್ರ ಅವರ ತಂಡ ಯಶಸ್ವಿಯಾಗಿದೆ.

ಮೂಲತಃ ಬಳ್ಳಾರಿ ಜಿಲ್ಲೆಯ ಕುರಿಹಟ್ಟಿಯ ಗಣೇಶ ಕಾಲನಿ ನಿವಾಸಿ ಶ್ರೀಕಾಂತ ಅಲಿಯಾಸ್ ರೊಡ್ಡ ಭೀಮಲಿಂಗಪ್ಪ ಎಂಬ 26 ವರ್ಷದ ಕಾರು ಚಾಲಕನೇ ಕಳ್ಳ ಎಂಬುದನ್ನ ಪತ್ತೆ ಹಚ್ಚಿ, ಬಂಧಿಸಿದ್ದಾರೆ. ಆರೋಪಿಯಿಂದ 165 ಗ್ರಾಂ ಚಿನ್ನ, 20 ಗ್ರಾಂ ಬೆಳ್ಳಿ ಹಾಗೂ 30 ಸಾವಿರ ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ.
ಪಿಎಸ್ಐ ಕವಿತಾ ಎಸ್.ಎಂ, ಪ್ರೋಬೇಷನರಿ ಪಿಎಸ್‌ಐ ಸ್ವಾತಿ ಮುರಾರಿ, ಎಎಸ್ಐ ಎಂ.ಆರ್.ಮಲ್ಲಿಗವಾಡ, ಸಿಬ್ಬಂದಿಗಳಾದ ಮಲ್ಲಿಕಾರ್ಜುನ ಧನಿಗೊಂಡ, ಮಂಜುನಾಥ ಯಕ್ಕಡಿ, ಶ್ರೀನಿವಾಸ ಯರಗುಪ್ಪಿ, ಕೃಷ್ಣಾ ಮೊಟೆಬೆನ್ನೂರ, ಮಂಜುನಾಥ ಹಾಲವರ, ಪ್ರಕಾಶ ಕಲಗುಡಿ, ರೇಣು ಸಿಕ್ಕಲಗಾರ, ಮಾಬುಸಾಬ ಮುಲ್ಲಾ, ಆರೂಢ ಕರೆಣ್ಣನವರ ಅವರುಗಳ ಕಾರ್ಯವೈಖರಿಗೆ ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.