“3 ಪೇಜಿ”ನ ಸತ್ಯ ಹಳೇಹುಬ್ಬಳ್ಳಿ ಠಾಣೆಯಲ್ಲಿ ಕಾಣಲಿಲ್ಲ- ಪೊಲೀಸ್ ಕಮೀಷನರ್….!!!
ಇನ್ಸ್‌ಪೆಕ್ಟರ್ ಸುರೇಶ ಯಳ್ಳೂರ್ ಮೇಲಿನ ಆರೋಪ ಸುಳ್ಳು: ತನಿಖೆಯಲ್ಲಿ ಪೂರಕ ಅಂಶ ಕಂಡಿಲ್ಲ ಕಮೀಷನರ್ ಎನ್. ಶಶಿಕುಮಾರ್
ಹುಬ್ಬಳ್ಳಿ: ಹಳೇಹುಬ್ಬಳ್ಳಿ ಠಾಣೆಯ ಇನ್ಸ್‌ಪೆಕ್ಟರ್ ಸುರೇಶ್ ಯಳ್ಳೂರ್ ಅವರು ಠಾಣೆಯ ಮಹಿಳಾ ಸಿಬ್ಬಂದಿಗಳಿಗೆ ಕಿರುಕುಳ ಹಾಗೂ ಕೆಲವು ಸಹೋದ್ಯೋಗಿಗಳಿಗೆ ಕೆಲಸದ ವಿಚಾರಕ್ಕೇ ಕಿರುಕುಳ ನೀಡುತ್ತಿದ್ದಾರೆ ಎಂಬ ಅನಾಮದೇಯ ಪತ್ರ ವೈರಲ್ ಆಗಿತ್ತು.
ಈ ವಿಚಾರಕ್ಕೇ ಸಂಬಂಧಿಸಿದಂತೆ ಕಾನೂನು ಸುವ್ಯವಸ್ಥೆ ಡಿಸಿಪಿ ಮಹಾನಿಂಗ ನಂದಗಾವಿ ಸೋಮವಾರ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಮಹಿಳಾ ಮತ್ತು ಬೇರೆ ಸಿಬ್ಬಂದಿಗಳನ್ನು ವಿಚಾರಣೆ ಮಾಡಿದಾಗ ಪತ್ರದಲ್ಲಿ ಬರೆದಿರುವ ಪ್ರಕಾರ ಇನ್ಸ್‌ಪೆಕ್ಟರ್ ಸುರೇಶ ಅವರ ಮೇಲೆ ಮಾಡಿದ ಆರೋಪಕ್ಕೆ ಪೂರಕವಾದ ದಾಖಲೆ ಹಾಗೂ ಮಾಹಿತಿ ಲಭ್ಯವಾಗಿಲ್ಲ. ಠಾಣೆಯಲ್ಲಿರುವ ಮಹಿಳಾ ಸಿಬ್ಬಂದಿಗಳು ಯಾರೊಬ್ಬರೂ ಕೂಡಾ ಈ ಪತ್ರವನ್ನು ಬರೆದಿಲ್ಲ. ಹಾಗೆಯೇ ಇನ್ಸ್ಪೆಕ್ಟರ್ ಕಿರುಕುಳ ಕೊಡುತ್ತಿದ್ದಾರೆ ಎಂಬ ಮಾಹಿತಿಯನ್ನು ಕೂಡಾ ಹಿರಿಯ ಅಧಿಕಾರಿಗಳ ಮುಂದೆ ಹೇಳಿಕೊಂಡಿಲ್ಲ.
ಅಷ್ಟೇ ಅಲ್ಲದೇ ಇಂದು ಬೆಳ್ಳಿಗ್ಗೆ ಖುದ್ದು ಕಮಿಷನರ್ ಎನ್ ಶಶಿಕುಮಾರ್ ಅವರು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ತೆರಳಿ ಅಲ್ಲಿರುವ ಮಹಿಳಾ ಕಾನ್ಸ್‌ಟೇಬಲ್ ಗಳನ್ನು ವಿಚಾರಣೆ ಮಾಡಿದಾಗ ಅವರು ಕೂಡಾ ಇನ್ಸ್‌ಪೆಕ್ಟರ್ ಸುರೇಶ ಯಳ್ಳೂರ್ ಅವರ ಬಗ್ಗೆ ಯಾವುದೇ ದೂರನ್ನು ನೀಡಿಲ್ಲ ಎಂಬ ಮಾಹಿತಿ ನೀಡಿಲ್ಲ ಎಂಬ ಮಾಹಿತಿಯನ್ನು ಖುದ್ದು ಕಮಿಷನರ್ ಎನ್ ಶಶಿಕುಮಾರ್ ಹೇಳಿದ್ದಾರೆ.
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಸದ್ಯ ಎರಡು ಬಣಗಳ ನಡುವಿನ ವಿಚಾರಕ್ಕೇ ಸಂಬಂಧಿಸಿದಂತೆ ಇನ್ಸ್ಪೆಕ್ಟರ್ ಹೆಸರು ಕೆಡಿಸಲು ಈ ರೀತಿಯ ಷಡ್ಯಂತ್ರ ನಡೆಸಲಾಗುತ್ತಿದೆ ಎಂಬ ಅಂಶಗಳು ಕಂಡು ಬಂದಿದೆ. ಸದ್ಯ ಈ ಪತ್ರವನ್ನು ವೈರಲ್ ಮಾಡಿದ್ದು ಇದರಲ್ಲಿ ಯಾರ ಕೈವಾಡವಿದೆ ಎಂಬುದನ್ನು ಪತ್ತೆ ಮಾಡಲು ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.