ಎಲ್ರೂ ಒಂಬತ್ತು ಗಂಟೆಯೊಳಗೆ ಬಂದ್ ಮಾಡಿ- ಹುಬ್ಬಳ್ಳಿಯಲ್ಲಿ ಪೊಲೀಸ್ ಮನವಿ…!

ಹುಬ್ಬಳ್ಳಿ: ಕೊರೋನಾ ವೈರಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹೊರಡಿಸಿರುವ ಆದೇಶವನ್ನ ಪಾಲನೆ ಮಾಡುವಂತೆ ಸಾರ್ವಜನಿಕರಲ್ಲಿ ಹುಬ್ಬಳ್ಳಿ ಸಂಚಾರಿ ಠಾಣೆ ಪೊಲೀಸರು ಜಾಗೃತೆ ಮೂಡಿಸುತ್ತಿದ್ದಾರೆ.
ಇಂದಿನಿಂದ ನೈಟ್ ಕರ್ಪ್ಯೂ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಚೆನ್ನಮ್ಮ ವೃತ್ತದಲ್ಲಿ ಪೂರ್ವ ಸಂಚಾರಿ ಠಾಣೆಯ ಪೊಲೀಸರು, ಒಂಬತ್ತು ಗಂಟೆಯ ನಂತರ ಯಾರೂ ಸುಖಾಸುಮ್ಮನೆ ಹೊರಗೆ ಬರದಂತೆಯೂ, ಸಂಚಾರ ನಡೆಸದಂತೆಯೂ ಹೇಳುತ್ತಿದ್ದಾರೆ.
ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರಕಾರದ ಆದೇಶವನ್ನ ಪಾಲನೆ ಮಾಡುವಂತೆ ಕೋರಿದ ಪೊಲೀಸರು, ಒಂಬತ್ತು ಗಂಟೆಗೆ ಪ್ರಮುಖವಾದ ಅಂಗಡಿಗಳನ್ನ ಹೊರತು ಪಡಿಸಿ, ಇನ್ನುಳಿದವರು ಬಂದ್ ಮಾಡುವಂತೆಯೂ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಹುಬ್ಬಳ್ಳಿಯಲ್ಲೂ ಪ್ರತಿ ದಿನ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸರಕಾರದ ಆದೇಶವನ್ನ ಪಾಲನೆ ಮಾಡುವ ಮೂಲಕ, ವೈರಸ್ ನಿಂದ ಉಳಿಯಬೇಕಾದ ಅವಶ್ಯಕತೆಯಿದೆ.