ಆಟೋ ಮಾಲೀಕ, ಚಾಲಕರಿಗೆ ”ಕಾನೂನು ಪಾಠ” ಮಾಡಿದ ಇನ್ಸಪೆಕ್ಟರ್ ಶ್ರೀಕಾಂತ ತೋಟಗಿ…!
1 min readಹುಬ್ಬಳ್ಳಿ: ಉತ್ತರ ಸಂಚಾರಿ ಠಾಣೆಯಲ್ಲಿ ಇಂದು ಎಂದಿನಂತೆ ಸ್ಥಿತಿ ಇರಲಿಲ್ಲ. ಪದೇ ಪದೇ ಹಲವು ಗೊಂದಲಗಳಿಗೆ ಕಾರಣವಾಗುತ್ತಿರುವ ಆಟೋ ಚಾಲಕ, ಮಾಲೀಕರನ್ನ ಕರೆದು, ಇನ್ಸಪೆಕ್ಟರ್ ಕಾನೂನು ಪಾಠ ಮಾಡುವಂತಾಗಿದೆ.
ಹೌದು.. ಉತ್ತರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಗೆ ಪ್ರಮುಖ ಸ್ಥಳಗಳು ಬರುತ್ತವೆ. ಆಗ, ಪ್ರಯಾಣಿಕರೊಂದಿಗೆ ಸಹಕಾರ ನೀಡದ ಆಟೋದವರು ಗೊಂದಲ ಮಾಡಿಕೊಂಡು ಪೊಲೀಸ್ ಠಾಣೆಗೆ ಬರುವಂತಾಗಿದೆ. ಇದನ್ನ ತಪ್ಪಿಸಲು ಇನ್ಸಪೆಕ್ಟರ್ ತೋಟಟಗಿ ಇಂದು ಮುಂದಾಗಿದ್ದರು.
ಪ್ರಯಾಣಿಕರ ಜೊತೆ ಅಸಭ್ಯವಾಗಿ ವರ್ತಿಸುವುದು, ಹೆಚ್ಚಿಗೆ ಹಣದ ಬೇಡಿಕೆಯಿಡುವುದು ಹಾಗೂ ಹೆಚ್ಚು ಪ್ರಯಾಣಿಕರನ್ನ ತುಂಬಿಕೊಂಡು ಹೋಗುವುದು ಕಾನೂನು ಬಾಹಿರವಾಗಿದೆ. ಇದನ್ನ ಮೀರಿದರೇ ಕ್ರಮವನ್ನ ಜರುಗಿಸಲಾಗುವುದೆಂದು ಎಚ್ಚರಿಕೆ ನೀಡಿದರು.
ಕೆಲವು ಬಾರಿ ಆಟೋದವರು ಪ್ರಯಾಣಿಕರಿಗೆ ಕಿರಿಕಿರಿ ಕೊಡುವುದನ್ನ ಪೊಲೀಸರು ಸಹಿಸುವುದಿಲ್ಲ. ಆಟೋದ ಪ್ರಯಾಣ ಬಹಳ ಕಡಿಮೆಯಾಗಿರುವುದು ಎಲ್ಲರಿಗೂ ಗೊತ್ತಿದೆ. ಹಾಗಾಗಿ, ಮುಂದಿನ ದಿನದಲ್ಲಿ ಕಾನೂನಿನ ಅರಿವನ್ನಿಟ್ಟುಕೊಂಡು ಮುನ್ನಡೆಯಬೇಕೆಂದು ಎಚ್ಚರಿಕೆ ನೀಡಿದರು.