ಧಾರವಾಡಕ್ಕೆ ಮರಳಿದ ‘ಐರನ್ ಮ್ಯಾನ್’ ಪೊಲೀಸ್ ಇನ್ಸಪೆಕ್ಟರ್ ಮುರುಗೇಶ ಚೆನ್ನಣ್ಣನವರ….

ಧಾರವಾಡ: ದೇಶದಲ್ಲಿ ಹೆಚ್ಚಾಗುತ್ತಿರುವ ಮಾದಕ ದ್ರವ್ಯ ಡ್ರಗ್ಸ್ ಬಗ್ಗೆ ಸರಕಾರದ ಗಮನ ಸೆಳೆಯುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಸೈಕಲ್ ಯಾತ್ರೆ ಕೈಗೊಂಡಿದ್ದ ಹುಬ್ಬಳ್ಳಿ ಹೆಸ್ಕಾಂನ ಪೊಲೀಸ್ ಇನ್ಸಪೆಕ್ಟರ್ ಮುರುಗೇಶ ಚೆನ್ನಣ್ಣನವರ ಧಾರವಾಡ ನಗರಕ್ಕೆ ಈಗಷ್ಟೇ ಆಗಮಿಸಿದ್ದಾರೆ.

ಜಮ್ಮು-ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಸುಮಾರು 3800 ಕಿಲೋಮೀಟರ್ ಪ್ರಯಾಣವನ್ನ ಮುಗಿಸಿ ಬಂದ ಇನ್ಸಪೆಕ್ಟರ್ ಚೆನ್ನಣ್ಣನವರ ಹಾಗೂ ಪ್ರಶಾಂತ ಅವರಿಗೆ ಧಾರವಾಡ ಹೊರವಲಯದಲ್ಲಿ ಸಾರ್ವಜನಿಕರು ಆತ್ಮೀಯವಾಗಿ ಸ್ವಾಗತಿಸಿದರು.

ಭಾರತ ದೇಶದಲ್ಲಿ ಓರ್ವ ಪೊಲೀಸ್ ಇನ್ಸಪೆಕ್ಟರ್ ಇಂತಹದೊಂದು ಸಾಹಸಕ್ಕೆ ಕೈ ಹಾಕಿರಲಿಲ್ಲ. ಅತಿಯಾದ ಚಳಿಯಲ್ಲಿ ಸೈಕಲ್ ಯಾತ್ರೆ ಮಾಡಿದ್ದು ಅಭೂತಪೂರ್ವ. ಸಾರ್ವಜನಿಕರ ನೆಮ್ಮದಿಯನ್ನ ಬಯಸುವ ಉದ್ದೇಶದಿಂದ ಸೈಕಲ್ ಯಾತ್ರೆ ಮುಗಿಸಿ ಮರಳಿ ಬಂದಿರುವ ಚೆನ್ನಣ್ಣನವರ ಅವರಿಗೆ ಕರ್ನಾಟಕವಾಯ್ಸ್.ಕಾಂ ಕೂಡಾ ಅಭಿನಂದನೆ ಸಲ್ಲಿಸತ್ತೆ.